HomeHealthಮಲಬದ್ಧತೆ ನಿವಾರಣೆಗೆ ಸುಲಭ ಪರಿಹಾರ ಈ ಜ್ಯೂಸ್

ಮಲಬದ್ಧತೆ ನಿವಾರಣೆಗೆ ಸುಲಭ ಪರಿಹಾರ ಈ ಜ್ಯೂಸ್

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ. ಹಾಗಿದ್ದರೆ ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ.

ಮೂಸಂಬಿ ಜ್ಯೂಸ್

ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ. ಮೂಸಂಬಿ ಜ್ಯೂಸ್ ಗೆ ಒಂದು ಚಿಟಿಕಿ ಉಪ್ಪು ಸೇರಿಸಿ ಕುಡಿದರೆ ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೈನಾಪಲ್ ಜ್ಯೂಸ್

ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು ಸಂಬಂಧಿ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಉತ್ತಮ.

ನಿಂಬೆ ಪಾನಕ

ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ. ಮಲ ವಿಸರ್ಜಿಸಲು ಕಷ್ಟವಾಗುತ್ತಿದ್ದರೆ, ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.

For Latest News Updates, Join Our Whatsapp Community🚩
RELATED ARTICLES

Most Popular