ಅಶ್ವಗಂಧ ಒಂದು ಆಯುರ್ವೇದ ಔಷಧಿ. ದೇಹದಲ್ಲಿನ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಅಶ್ವಗಂಧದ ಪ್ರಯೋಜನಗಳು ಹತ್ತಾರು. ಅಶ್ವಗಂಧ ಸೇವನೆಯಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ.
ಪುರುಷರಲ್ಲಿ ಬಂಜೆತನದ ಸಮಸ್ಯೆಯನ್ನು ಹೋಗಲಾಡಿಸಲು ಇದು ಪರಿಣಾಮಕಾರಿಯಾಗಿದೆ. ವಾಸ್ತವವಾಗಿ, ಇದರ ಸೇವನೆಯು ಪುರುಷ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅಶ್ವಗಂಧ ವಿಶೇಷವಾಗಿ ಪುರುಷರಿಗೆ ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಇದರ ಹೊರತಾಗಿ ಅಶ್ವಗಂಧದ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅಶ್ವಗಂಧ ತುಂಬಾ ಉಪಯುಕ್ತವಾಗಿದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಪುರುಷರು ಕಡಿಮೆ ವೀರ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಅಂತಹ ಪುರುಷರ ಸಮಸ್ಯೆಗೆ ಅಶ್ವಗಂಧ ಪರಿಹಾರ ನೀಡಬಲ್ಲದು.
ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಬಲ್ಲ ಅನೇಕ ಪೋಷಕಾಂಶಗಳು ಅಶ್ವಗಂಧದಲ್ಲಿವೆ. ಇದರ ಸೇವನೆಯಿಂದ ಪುರುಷರ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ. ಆದಾಗ್ಯೂ, ವೈದ್ಯರು ಅಥವಾ ತಜ್ಞರ ಸಲಹೆಯಿಲ್ಲದೆ ಇದನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ.ಅಶ್ವಗಂಧ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು.
ಮಧುಮೇಹಿಗಳು ಇದನ್ನು ಸೇವನೆ ಮಾಡುವುದು ಸೂಕ್ತ. ಅಶ್ವಗಂಧ ಸೇವನೆಯಿಂದ ಒತ್ತಡ ಸಹ ಕಡಿಮೆಯಾಗುತ್ತದೆ. ಅತಿಯಾದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಅಶ್ವಗಂಧ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿದ್ದರೆ, ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.