alex Certify ಪರ್ಫೆಕ್ಟ್ ಮೇಕಪ್ ಗಾಗಿ ಬಳಸಿ ಚರ್ಮದ ಟೋನ್ ಪ್ರಕಾರ ʼಕನ್ಸೀಲರ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ಫೆಕ್ಟ್ ಮೇಕಪ್ ಗಾಗಿ ಬಳಸಿ ಚರ್ಮದ ಟೋನ್ ಪ್ರಕಾರ ʼಕನ್ಸೀಲರ್ʼ

ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ ನಲ್ಲಿ ಅತಿ ಮುಖ್ಯ ಎನಿಸಿಕೊಳ್ಳುವ ಈ ಕನ್ಸೀಲರ್ ಖರೀದಿಗೂ ಮೊದಲು ನೀವು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಕನ್ಸೀಲರ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ಉತ್ತಮ ಗುಣಮಟ್ಟದ ಕನ್ಸೀಲರ್ ಖರೀದಿ ಒಳ್ಳೆಯದು. ಬೆಲೆ ಕಡಿಮೆ ಎಂಬ ಮಾತ್ರಕ್ಕೆ ಕಡಿಮೆ ಬೆಲೆಯ ಕನ್ಸೀಲರ್ ಖರೀದಿ ಮಾಡಿದ್ರೆ ನಿಮ್ಮ ಸೌಂದರ್ಯ ಹಾಳಾಗೋದ್ರಲ್ಲಿ ಸಂಶಯವಿಲ್ಲ.

ಕನ್ಸೀಲರ್ ಬೇರೆ ಬೇರೆ ಬಣ್ಣದಲ್ಲಿ ಕೂಡ ಸಿಗುತ್ತದೆ. ನಿಮ್ಮ ಚರ್ಮದ ಟೋನ್ ಪ್ರಕಾರ ನೀವು ಯಾವ ಬಣ್ಣ ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಕನ್ಸೀಲರ್ ನಿಮ್ಮ ಚರ್ಮದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಹಾಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವುಗಳು ವಿವರ ತಿಳಿದು ಬಳಸಿದರೆ ಯಾವುದೇ ಹಾನಿಯಿಲ್ಲದೆ ಸೌಂದರ್ಯ ದುಪ್ಪಟ್ಟಾಗುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...