HomeAstroಮನೆಯ ʼದಕ್ಷಿಣʼ ದಿಕ್ಕಿನಲ್ಲಿರುವ ಈ ವಸ್ತು ತಕ್ಷಣ ತೆಗೆಯಿರಿ

ಮನೆಯ ʼದಕ್ಷಿಣʼ ದಿಕ್ಕಿನಲ್ಲಿರುವ ಈ ವಸ್ತು ತಕ್ಷಣ ತೆಗೆಯಿರಿ

ಮನೆ ನಿರ್ಮಾಣದ ವೇಳೆ ವಾಸ್ತು ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣ ಮಾಡಿದ ಮನೆಯಲ್ಲಿ ಸಂಪತ್ತು, ಆರೋಗ್ಯ, ಆಯಸ್ಸಿನ ವೃದ್ಧಿಯಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣವಾಗದ ಮನೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ ದಕ್ಷಿಣ ದಿಕ್ಕನ್ನು ಅಶುಭ ದಿಕ್ಕೆಂದು ಪರಿಗಣಿಸಲಾಗಿದೆ.

ಕೆಲವೊಂದು ವಸ್ತುಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ವಸ್ತುಗಳು ದಕ್ಷಿಣ ದಿಕ್ಕಿನಲ್ಲಿದ್ರೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದೂ ಗಡಿಯಾರವನ್ನು ಇಡಬಾರದು. ದಕ್ಷಿಣ ದಿಕ್ಕಿನಲ್ಲಿ ಗಡಿಯಾರವಿದ್ದರೆ ಆ ಮನೆಯ ಯಜಮಾನ ರೋಗಕ್ಕೆ ತುತ್ತಾಗುತ್ತಾನೆ. ಆಯಸ್ಸು ಕಡಿಮೆಯಾಗುತ್ತದೆ.

ಮನೆಯ ದಕ್ಷಿಣ ದಿಕ್ಕಿನಲ್ಲಿ ಫ್ರಿಜ್ ಕೂಡ ಇಡಬಾರದು. ದಕ್ಷಿಣ ದಿಕ್ಕು ಅಗ್ನಿಯನ್ನು ಪ್ರತಿನಿಧಿಸುತ್ತದೆ. ನೈರುತ್ಯ ದಿಕ್ಕು ಫ್ರಿಜ್ ಇಡಲು ಉತ್ತಮ ಸ್ಥಳ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ದಿಕ್ಕಿನಲ್ಲಿ ಹಣ ಇಡಬಾರದು. ಕಪಾಟು, ತಿಜೋರಿಯಿಟ್ಟರೆ ಹಣದ ಸಮಸ್ಯೆ ಎದುರಾಗುತ್ತದೆ. ಎಷ್ಟೇ ಕೆಲಸ ಮಾಡಿದ್ರು ಕೈನಲ್ಲಿ ಹಣ ನಿಲ್ಲುವುದಿಲ್ಲ.

ಮನೆಯ ದಕ್ಷಿಣ ದಿಕ್ಕಿನಲ್ಲಿ ಅಕ್ವೇರಿಯಂ ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದ್ರಿಂದ ಹಣದ ಸಮಸ್ಯೆ ಎದುರಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular