HomeBeautyಈ ಅಭ್ಯಾಸಗಳಿಂದಲೇ ನಿಮ್ಮ ʼಸೌಂದರ್ಯʼ ಹಾಳಾಗುತ್ತಿರಬಹುದು ಎಚ್ಚರ....!

ಈ ಅಭ್ಯಾಸಗಳಿಂದಲೇ ನಿಮ್ಮ ʼಸೌಂದರ್ಯʼ ಹಾಳಾಗುತ್ತಿರಬಹುದು ಎಚ್ಚರ….!

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಹುಡುಗಿಯರಂತೂ ತಮ್ಮ ಸೌಂದರ್ಯ ವರ್ಧನೆಗೆ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಇಂತಹ ಕೆಲವೊಂದು ಅಭ್ಯಾಸಗಳು ನಿಮ್ಮ ಅಂದವನ್ನು ಹೆಚ್ಚಿಸುವ ಬದಲು ಸೌಂದರ್ಯಕ್ಕೆ ಕುತ್ತು ತರಬಹುದು.

ರಾತ್ರಿ ಮುಖ ತೊಳೆಯದೇ ಮಲಗುವುದು : ರಾತ್ರಿ ಮಲಗುವಾಗ ಮುಖವನ್ನು ಸ್ವಚ್ಛವಾಗಿಟ್ಟುಕೊಂಡು ಮಲಗಬೇಕು. ಆಯಾಸವಾಗಿದೆ ಅಂತಾ ಹಾಗೇ ಮಲಗಿದ್ರೆ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಮುಖದ ಹೊಳಪು ಕೂಡ ಮರೆಯಾಗುತ್ತದೆ.

ಕಡಿಮೆ ನೀರು ಕುಡಿಯುವುದು : ನೀರನ್ನು ಕಡಿಮೆ ಕುಡಿದರೆ ನಿಮ್ಮ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ತುರಿಕೆ, ಚರ್ಮ ಬಿಗಿಯಾಗುವುದು ಇವೆಲ್ಲ ನಿರ್ಜಲೀಕರಣದ ಲಕ್ಷಣಗಳು. ಸಾಕಷ್ಟು ನೀರು ಕುಡಿದರೆ ಚರ್ಮ ಕಾಂತಿಯುಕ್ತವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸನ್‌ ಸ್ಕ್ರೀನ್‌ ಹಚ್ಚದಿರುವುದು : ಬಹುತೇಕರು ಮನೆಯಿಂದ ಹೊರಡುವಾಗ ಮುಖಕ್ಕೆ ಸನ್‌ ಸ್ಕ್ರೀನ್‌ ಹಚ್ಚುವುದೇ ಇಲ್ಲ. ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸನ್‌ಸ್ಕ್ರೀನ್‌ನಲ್ಲಿ ಜಿಂಕ್ ಆಕ್ಸೈಡ್, ಟೈಟಾನಿಯಂ ಆಕ್ಸೈಡ್ ನಂತಹ ಪ್ರಮುಖ ಅಂಶಗಳಿರುತ್ತವೆ. ಇವು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ. ‌

For Latest News Updates, Join Our Whatsapp Community🚩
RELATED ARTICLES

Most Popular