ಕೆಟ್ಟ ದೃಷ್ಟಿ-ಕುಟುಂಬ ಸಮಸ್ಯೆ ದೂರ ಮಾಡುತ್ತೆ ಇದು

ಅರಿಶಿನ ಹೆಸರೇ ಹೇಳುವಂತೆ ಬಣ್ಣ ಹಳದಿಯಾಗಿರುತ್ತದೆ. ಆದ್ರೆ ಕಪ್ಪು ಬಣ್ಣದ ಅರಿಶಿನ ಕೂಡ ಇದೆ. ಬೇರೆ ಬೇರೆ ಭಾಷೆಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಹಳದಿ ಅರಿಶಿನವನ್ನು ದೇವರ ಪೂಜೆ, ಮಂಗಳಕರ ಚಟುವಟಿಕೆಗೆ ಬಳಸಲಾಗುತ್ತದೆ. ಕರಿ ಅರಿಶಿನ ಬುದ್ಧಿ ಹಾಗೂ ಧನದ ಸಂಕೇತವಾಗಿದೆ.

ತಂತ್ರ ವಿದ್ಯೆಗೆ ಕರಿ ಅರಿಶಿನವನ್ನು ಬಳಸಲಾಗುತ್ತದೆ. ಇದ್ರ ಜೊತೆಗೆ ದುಷ್ಟಶಕ್ತಿಗಳನ್ನು ದೂರ ಮಾಡುವ ತಾಕತ್ತು ಕಪ್ಪು ಅರಿಶಿನಕ್ಕಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಮಕ್ಕಳಿಗೆ ದೃಷ್ಟಿ ತಾಗಿದಲ್ಲಿ ಇದನ್ನು ಬಳಸಲಾಗುತ್ತದೆ. ಹಾಗೆ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮಗುವಿಗೆ ದೃಷ್ಟಿ ಬಿದ್ದಲ್ಲಿ ಕಪ್ಪು ಬಟ್ಟೆಯಲ್ಲಿ ಕಪ್ಪು ಅರಿಶಿನವನ್ನು ಕಟ್ಟಿ ರಾತ್ರಿ ಪೂರ್ತಿ ಮಗುವಿನ ಮೇಲೆ ನೇತು ಹಾಕಿ. ಬೆಳಿಗ್ಗೆ ಹರಿಯುವ ನೀರಿನಲ್ಲಿ ಬಿಡಿ. ತ್ವರಿತವಾಗಿ ಲಾಭ ಕಾಣಬಹುದು.

ಶುಕ್ಲ ಪಕ್ಷದ ಪ್ರಥಮ ಶುಕ್ರವಾರ ಬೆಳ್ಳಿ ಡಬ್ಬದಲ್ಲಿ ಕಪ್ಪು ಅರಿಶಿನ, ಕುಂಕುಮ ಹಾಗೂ ನಾಗಕೇಸರಿಯನ್ನು ಹಾಕಿ ದೇವಿ ಲಕ್ಷ್ಮಿ ಮುಂದೆ ಇಡಿ. ಸ್ವಲ್ಪ ಸಮಯದ ನಂತ್ರ ನಿಮ್ಮ ಕಪಾಟಿನಲ್ಲಿಡಿ. ಆರ್ಥಿಕ ವೃದ್ಧಿಯಾಗಲಿದೆ.

ಹೊಸ ಕಾರ್ಯಕ್ಕೆ ಹೋಗುವ ಮುನ್ನ ಕಪ್ಪು ಅರಿಶಿನದ ತಿಲಕವನ್ನಿಟ್ಟುಕೊಂಡು ಹೋಗಿ. ಹೀಗೆ ಮಾಡಿದಲ್ಲಿ ಯಶಸ್ಸು ನಿಮ್ಮದಾಗಲಿದೆ.

ಮನೆಯಲ್ಲಿ ಶಾಂತಿ ನೆಲೆಸಲು ಬಯಸುವವರು ಕಪ್ಪು ಅರಿಶಿನವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಬಳಿ ನೇತುಹಾಕಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read