ಉಣ್ಣೆಯ ಬಟ್ಟೆಗಳು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸುವುದು ಸೂಕ್ತ. ಆದರೆ ಈ ಬಟ್ಟೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಅದು ಹಾಳಾಗುತ್ತದೆ. ಅಲ್ಲದೇ ಬಟ್ಟೆ ಒಗೆಯುವಾಗ ನೀವು ಮಾಡುವಂತಹ ಕೆಲವು ತಪ್ಪುಗಳು ಕೂಡ ಉಣ್ಣೆಯ ಬಟ್ಟೆಯ ಹೊಳಪನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಉಣ್ಣೆಯ ಬಟ್ಟೆಯನ್ನು ವಾಶ್ ಮಾಡುವಾಗ ಈ ಸಲಹೆ ಪಾಲಿಸಿ.
ಉಣ್ಣೆಯ ಬಟ್ಟೆಗಳನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆಯುವಾಗ ಓವರ್ ಲೋಡ್ ಆಗದಂತೆ ನೋಡಿಕೊಳ್ಳಿ. ಇವು ಅನೇಕ ಬಟ್ಟೆಗಳನ್ನು ಒಂದೇ ಬಾರಿ ತೊಳೆದರೆ ಇದರಿಂದ ಬಟ್ಟೆ ಸರಿಯಾಗಿ ಸ್ವಚ್ಛಗೊಳ್ಳದೇ ಬೇಗನೆ ಹಾಳಾಗುತ್ತದೆ.
ಉಣ್ಣೆಯ ಬಟ್ಟೆಗಳನ್ನು ಪದೇ ಪದೇ ತೊಳೆಯಬೇಡಿ. ಒಮ್ಮೆ ಧರಿಸಿದ ಬಳಿಕ ಅದನ್ನು ಸೂರ್ಯನ ಬಿಸಿಲಿಗೆ ಹಾಕಿ. ಹೀಗೆ 2-3 ಬಾರಿ ಧರಿಸಿದ ಬಳಿಕ ಅದನ್ನು ತೊಳೆಯಿರಿ. ಉಣ್ಣೆಯ ಬಟ್ಟೆಗಳನ್ನು ಆಗಾಗ ಒಗೆದರೆ ಬಟ್ಟೆ ಬೇಗ ಹಾಳಾಗುತ್ತದೆ.
ಕೆಲವರು ಬಟ್ಟೆಗಳನ್ನು ಸ್ವಚ್ಛಗೊಳಿಸುವಾಗ ಕೊಳೆ ಹೋಗಲೆಂದು ಬಿಸಿ ನೀರಿನಲ್ಲಿ ತೊಳೆಯುತ್ತಾರೆ. ಆದರೆ ಉಣ್ಣೆಯ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಡಿ. ಇದರಿಂದ ಬಟ್ಟೆಯ ದಾರಗಳು ಹಾಳಾಗುತ್ತದೆ. ಇದರಿಂದ ಬಟ್ಟೆ ಹೆಚ್ಚುಕಾಲ ಬಾಳಿಕೆ ಬರಲ್ಲ. ಹಾಗಾಗಿ ತಣ್ಣೀರಿನಲ್ಲಿ ಬಟ್ಟೆಗಳನ್ನು ವಾಶ್ ಮಾಡಿ.