ಮುತ್ತಿಕ್ಕುವುದರಿಂದ ಇದೆ ಇಷ್ಟೆಲ್ಲಾ ಲಾಭ 01-12-2024 8:25AM IST / No Comments / Posted In: Latest News, Live News, Special, Life Style ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮುತ್ತಿನಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಮುತ್ತು ಸಂಗಾತಿಯನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಮುತ್ತು, ಜೋಡಿಯ ಯೌವನದ ಹೊಳಪನ್ನು ಹೆಚ್ಚಿಸುತ್ತದೆ. ಒತ್ತಡದಿಂದಾಗಿ ಚರ್ಮ ಬಿರುಕುಬಿಡುತ್ತದೆ. ಆದ್ರೆ ಚುಂಬನ ಮೆದುಳಿಗೆ ರಿಲ್ಯಾಕ್ಸ್ ನೀಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ವ್ಯಕ್ತಿಯು ತನ್ನ ಜೀವನದ 20,000 ನಿಮಿಷಗಳನ್ನು ಚುಂಬಿಸುವುದ್ರಲ್ಲಿ ಕಳೆಯುತ್ತಾನೆ. ಪ್ರೀತಿಯ ಜೊತೆಗೆ ಮುತ್ತಿನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಮುತ್ತು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮ ಅಥವಾ ಮೂಗಿನ ಸೂಕ್ಷ್ಮತೆ ಹೊಂದಿರುವ ವ್ಯಕ್ತಿಗಳಲ್ಲಿ ಅತಿಸೂಕ್ಷ್ಮ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವ ಶಕ್ತಿ ಮುತ್ತಿಗಿದೆ. 34 ಮುಖದ ಸ್ನಾಯುಗಳು ಮತ್ತು 112 ಭಂಗಿ ಸ್ನಾಯುಗಳು ಮುತ್ತಿನಿಂದ ಸಕ್ರಿಯವಾಗುತ್ತವೆ. ಸ್ನಾಯುಗಳನ್ನು ಬಿಗಿಯಾಗಿಡಲು ಸಹಾಯ ಮಾಡುತ್ತದೆ. ಚುಂಬನ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಿ, ಚರ್ಮವನ್ನು ಮೃದುಗೊಳಿಸುತ್ತದೆ. ರಕ್ತ ಪರಿಚಲನೆ ಇದ್ರಿಂದ ಉತ್ತಮಗೊಳ್ಳುತ್ತದೆ. ಚುಂಬನವು ತುಟಿಗಳು, ನಾಲಿಗೆ, ಕೆನ್ನೆ, ಮುಖ, ದವಡೆ ಮತ್ತು ಕತ್ತಿನ ಸ್ನಾಯುಗಳಿಗೆ ವ್ಯಾಯಾಮವನ್ನು ನೀಡುತ್ತದೆ. ಸುಕ್ಕುಗಳ ಸಮಸ್ಯೆ ಕಡಿಮೆ ಮಾಡುವ ಶಕ್ತಿ ಕೂಡ ಮುತ್ತಿಗಿದೆ. ವಯಸ್ಸನ್ನು ಮುಚ್ಚಿಡುವ ಶಕ್ತಿ ಮುತ್ತಿಗಿದೆ. ಹೆಚ್ಚು ಚಟುವಟಿಕೆಯಿಂದಿರಲು, ಸಂತೋಷವಾಗಿರಲು ಇದು ಸಹಾಯ ಮಾಡುತ್ತದೆ.