HomeBeautyಕೆಮಿಕಲ್‌ ಬೇಡ ಅನ್ನೋರು ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್

ಕೆಮಿಕಲ್‌ ಬೇಡ ಅನ್ನೋರು ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್

ನಿಮ್ಮ ಮೈಗೆ ಸೋಪು ಒಗ್ಗಿಕೊಳ್ಳುತ್ತಿಲ್ಲವೇ….? ಯಾವ ಸೋಪು ಬಳಸಿದರೂ ನಿಮಗೆ ತೃಪ್ತಿ ಆಗುತ್ತಿಲ್ಲವೇ…? ಹಾಗಿದ್ದರೆ ನೀವೇ ಮನೆಯಲ್ಲಿ ಹರ್ಬಲ್ ಸೋಪ್ ಅನ್ನು ತಯಾರಿಸಬಹುದು.

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಜೇನುತುಪ್ಪ, ಆಲಿವ್ ಆಯಿಲ್. ಅಲೋವೇರಾ ಎಣ್ಣೆ, ಕ್ಯಾಸ್ಟೈಲ್ ಸೋಪ್ ಹಾಗೂ ಸಾರಭೂತ ತೈಲ ಅಥವಾ ತೆಂಗಿನೆಣ್ಣೆ.

ಮೊದಲಿಗೆ ಸಾರಭೂತ ತೈಲದ ಹೊರತಾಗಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಒಂದು ಬಾಟಲಿಯಲ್ಲಿ ಹಾಕಿ. ಹತ್ತು ನಿಮಿಷ ಕಾಲ ಬಾಟಲಿಯನ್ನು ಬಿಡದೆ ಅಲುಗಾಡಿಸಿ. ಚೆನ್ನಾಗಿ ಬೆರೆತಿದೆ ಎನಿಸಿದರೆ ಅದಕ್ಕೆ ಸಾರಭೂತ ತೈಲವನ್ನು ಸೇರಿಸಿ. ಮತ್ತೊಮ್ಮೆ ಅಲ್ಲಾಡಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‌ ವರ್ಷಗಳ ಕಾಲ ಹಾಳಾಗದೆ ಉಳಿಯುವ ಇದನ್ನು ಬೇಕಿದ್ದಾಗ ತೆಗೆದು ಬಸಬಹುದು. ಇದರಲ್ಲಿರುವ ಆಲಿವ್ ಎಣ್ಣೆ ಹಾಗೂ ಅಲೋವೇರಾ ಜೆಲ್ ತ್ವಚೆಗೆ ತೇವಾಂಶವನ್ನು ಒದಗಿಸುತ್ತದೆ. ಎಣ್ಣೆಯಂಶ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಎಲ್ಲಾ ರೀತಿಯ ತ್ವಚೆ ಹೊಂದಿರುವವರೂ ಈ ಹರ್ಬಲ್ ಬಾಡಿ ವಾಶ್ ಅನ್ನು ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular