ಟೂತ್ ಪೇಸ್ಟ್ ಬಳಸಿ ಅನಗತ್ಯ ಕೂದಲನ್ನು ಹೋಗಲಾಡಿಸಿ

ಮಹಿಳೆಯರು ಮುಖದ ಮೇಲೆನ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್, ಥ್ರೆಡಿಂಗ್ ನಂತಹ ಮಾರ್ಗಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಮಾಡುವುದರಿಂದ ತುಂಬಾ ನೋವಾಗುತ್ತದೆ. ಹಾಗೇ ಚರ್ಮ ಕೆಂಪಾಗುವುದು, ಅಲರ್ಜಿಯಾಗುವುದು ಕಂಡು ಬರುತ್ತದೆ. ಹಾಗಾಗಿ ಬೇಡದ ಕೂದಲನ್ನು ತೆಗೆಯಲು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವ ಬದಲು ಟೂತ್ ಪೇಸ್ಟ್ ಬಳಸಿ ಬೇಡದ ಕೂದಲನ್ನು ತೆಗೆದುಹಾಕಿ.

ಟೂತ್ ಪೇಸ್ಟ್ ಹಲ್ಲುಜ್ಜಲು ಮಾತ್ರವಲ್ಲ ಅದನ್ನು ಬಳಸಿ ಬೇಡದ ಕೂದಲನ್ನು ಕೂಡ ತೆಗೆದುಹಾಕಬಹುದು. ಅದಕ್ಕಾಗಿ 2 ಚಮಚ ಕಡಲೆಹಿಟ್ಟಿಗೆ 1 ಚಮಚ ಬಿಳಿ ಟೂತ್ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದಕ್ಕೆ ಪೇಸ್ಟ್ ಸರಿಯಾದ ಹದಕ್ಕೆ ಬರುವಷ್ಟು ಹಾಲನ್ನು ಸೇರಿಸಿ ಕ್ರೀಂ ತಯಾರಿಸಿ.

ಬೇಡದ ಕೂದಲಿರುವ ಪ್ರದೇಶದಲ್ಲಿ ಇದನ್ನು ಹಚ್ಚಿ ಒಣಗಲು ಬಿಡಿ. ಈ ಕ್ರೀಂ ಒಣಗಿದ ಬಳಿಕ ಹತ್ತಿಯ ಸಹಾಯದಿಂದ ಕೂದಲಿಗೆ ವಿರುದ್ಧ ಭಾಗದಲ್ಲಿ ಉಜ್ಜಿಕೊಳ್ಳಿ. ಬಳಿಕ ತಣ್ಣೀರಿನಿಂದ  ತೊಳೆಯಿರಿ. ನಂತರ ಚರ್ಮಕ್ಕೆ ಮಾಯಿಶ್ಚರೈಸರ್ ಕ್ರೀಂ ಹಚ್ಚಿ. ಇದನ್ನು ವಾರದಲ್ಲಿ 3 ಬಾರಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read