ಉದ್ದನೆಯ ಕೂದಲು ಬೇಕು, ಕಪ್ಪಾದ ದಟ್ಟ ಕೂದಲು ಬೇಕೆಂದು ಎಲ್ಲರೂ ಬಯಸ್ತಾರೆ. ಮಹಿಳೆಯರು ನಾನಾ ವಿಧದ ಶ್ಯಾಂಪೂ, ಆಯಿಲ್ ಗಳನ್ನು ಕೂದಲಿಗೆ ಬಳಸುತ್ತಾರೆ. ಇನ್ನೂ ಕೆಲವರು ಬ್ಯೂಟಿ ಪಾರ್ಲರ್ ಗಳ ಮೊರೆ ಹೋಗುತ್ತಾರೆ. ಆದರೆ ಕೂದಲು ಚೆನ್ನಾಗಿರಲೆಂದು ಮಾಡುವ ಕಸರತ್ತುಗಳು ಕೂದಲಿಗೆ ಹಾನಿ ಮಾಡಬಹುದು. ಕೂದಲು ಶೈನಿಂಗ್ ಇರಲೆಂದು ಪ್ರತಿನಿತ್ಯ ಸ್ನಾನ ಮಾಡುವುದು ಕೂಡ ಕೂದಲು ಉದುರಲು ಮುಖ್ಯ ಕಾರಣವಾಗುತ್ತದೆ.
ಕೂದಲು ಉದುರುವುದು : ಮತ್ತೆ ಮತ್ತೆ ಶ್ಯಾಂಪೂ ಮಾಡುವುದರಿಂದ ಕೂದಲು ಶುಷ್ಕ ಮತ್ತು ಗಂಟಾಗುತ್ತದೆ. ಇದರಿಂದ ಕೂದಲು ಸತ್ವ ಕಳೆದುಕೊಂಡು ಉದುರಲು ಆರಂಭವಾಗುತ್ತದೆ.
ನ್ಯಾಚುರಲ್ ಆಯಿಲ್ ಹೊರಟುಹೋಗುತ್ತೆ : ಹೆಚ್ಚು ಹೆಚ್ಚು ಕೂದಲನ್ನು ತೊಳೆಯುವುದರಿಂದ ಕೂದಲಿನ ನ್ಯಾಚುರಲ್ ಆಯಿಲ್ ಹೊರಟುಹೋಗುತ್ತೆ. ಆಗ ಕೂದಲಿನ ಜೀವಕೋಶಗಳು ಎಣ್ಣೆಯ ಅಂಶವನ್ನು ಉಳಿಸಲು ನೈಸರ್ಗಿಕವಾಗಿ ಎಣ್ಣೆಯನ್ನು ಉತ್ಪಾದಿಸುತ್ತೆ. ಇದರಿಂದ ಕೂದಲು ಜಿಡ್ಡು ಜಿಡ್ಡಾಗಿ ಕಾಣಿಸುತ್ತದೆ.
ಕೂದಲಿನ ಬಣ್ಣ ಮಂಕಾಗುತ್ತದೆ : ಒಮ್ಮೆ ನೀವು ನಿಮ್ಮ ಕೂದಲಿಗೆ ಕಲರ್ ಅಥವಾ ಹೇರ್ ಡೈ ಮಾಡಿಸಿಕೊಂಡಿದ್ದಲ್ಲಿ ನೀವು ಪದೇ ಪದೇ ಕೂದಲನ್ನು ತೊಳೆಯಬಾರದು. ಹೀಗೆ ಮಾಡುವುದರಿಂದ ನಿಮ್ಮ ಕೂದಲ ಕಲರ್ ಬೇಗ ಫೇಡ್ ಆಗುತ್ತೆ. ವಾರದಲ್ಲಿ 2-3 ದಿನ ಮಾತ್ರ ಹೇರ್ ವಾಶ್ ಮಾಡಿ.
ಕವಲೊಡೆಯುವ ಕೂದಲು : ಕೂದಲನ್ನು ಪ್ರತಿನಿತ್ಯ ತೊಳೆದರೆ, ಕೂದಲು ಸತ್ವ ಕಳೆದುಕೊಂಡು ಕವಲೊಡೆಯಲು ಶುರುವಾಗುತ್ತದೆ. ತಲೆ ಸ್ನಾನ ಮಾಡಿದ ನಂತರ ಕೂದಲನ್ನು ವಿಪರೀತವಾಗಿ ಉಜ್ಜ ಬಾರದು.