ಯಾವ ಸಮಯದಲ್ಲಿ ಬೇಕಾದ್ರೂ ತಿನ್ನುವಂತಹ ತಿಂಡಿಗಳಲ್ಲಿ ಪಲಾವ್ ಕೂಡ ಒಂದು. ಬೆಳಿಗ್ಗೆ ಉಪಹಾರಕ್ಕೆ ಕೂಡ ಪಲಾವ್ ಮಾಡಿ ತಿನ್ನಬಹುದು. ಪ್ಯಾನ್ ನಲ್ಲಿ ಸುಲಭವಾಗಿ ಮಾಡುವ ತವಾ ಪಲಾವ್ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ.
ತವಾ ಪಲಾವ್ ಮಾಡಲು ಬೇಕಾಗುವ ಪದಾರ್ಥ:
500 ಗ್ರಾಂ ಅನ್ನ
4 ಟೊಮೋಟೋ
2 ಬೇಯಿಸಿದ ಆಲೂಗಡ್ಡೆ
2 ಈರುಳ್ಳಿ
50 ಗ್ರಾಂ ಹಸಿರು ಬಟಾಣಿ
ಒಂದು ಮೆಣಸಿನ ಕಾಯಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಜೀರಿಗೆ
4 ಚಮಚ ಎಣ್ಣೆ
1/3 ಕೊತ್ತೊಂಬರಿ ಸೊಪ್ಪು
2 ಚಮಚ ಪಾವ್ ಬಾಜಿ ಮಸಾಲಾ
½ ಚಮಚ ಅರಿಶಿನ
1 ಚಮಚ ಮೆಣಸಿನ ಪುಡಿ
½ ಚಮಚ ಗರಂ ಮಸಾಲಾ
ರುಚಿಗೆ ತಕ್ಕಷ್ಟು ಉಪ್ಪು
ತವಾ ಪಲಾವ್ ಮಾಡುವ ವಿಧಾನ:
ಒಂದು ದೊಡ್ಡ ತವಾ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತ್ರ ಜೀರಿಗೆ ಹಾಗೂ ಈರುಳ್ಳಿ ಹಾಕಿ. ಈರುಳ್ಳಿ ಕೆಂಪಗಾಗ್ತಾ ಇದ್ದಂತೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. 1-2 ನಿಮಿಷ ಬಿಸಿ ಮಾಡಿ.
ಇದಕ್ಕೆ ಹಸಿರು ಬಟಾಣಿ ಹಾಗೂ ಮೆಣಸಿನ ಕಾಯಿ ಹಾಕಿ. ನಂತ್ರ ಟೊಮೋಟೋ ಹಾಕಿ 2-3 ನಿಮಿಷ ಬೇಯಿಸಿ.
ಇದಕ್ಕೆ ಮೆಣಸಿನ ಪುಡಿ, ಅರಿಶಿನ ಪುಡಿ ಹಾಗೂ ಆಲೂಗಡ್ಡೆ ಹಾಕಿ ಬೇಯಿಸಿ. ನಂತ್ರ ಪಾವ್ ಬಾಜಿ ಮಸಾಲೆ ಹಾಕಿ. ಇದಕ್ಕೆ ಅನ್ನ, ಉಪ್ಪನ್ನು ಹಾಕಿ ನಂತ್ರ ಗರಂ ಮಸಾಲಾ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ 2-3 ನಿಮಿಷ ಬೇಯಿಸಿ ಗ್ಯಾಸ್ ಬಂದ್ ಮಾಡಿ.