ಮೆಟ್ರೋ ಸ್ಟೇಶನ್ ನಲ್ಲಿ ‘ಹಳದಿ ಟೈಲ್ಸ್’ ಹಾಕುವುದೇಕೆ ಗೊತ್ತಾ….?

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಮೆಟ್ರೋ ನಿಲ್ದಾಣಗಳಲ್ಲಿ ಇರುವ ಹಳದಿ ಬಣ್ಣದ ಉಬ್ಬು ತಗ್ಗಿನ ಟೈಲ್ಸ್ ಗಳನ್ನು ನೋಡಿರಬಹುದು. ಈ ಟೈಲ್ಸ್ ಗಳು ಗೋಲ, ಚೌಕ ಮತ್ತು ಉದ್ದನೆಯ ಆಕಾರದಲ್ಲಿ ಇರುತ್ತವೆ. ಇದನ್ನು ಇಲ್ಲಿ ಜನರು ಜಾರಿ ಬೀಳುತ್ತಾರೆಂದೋ ಅಥವಾ ಸುಂದರವಾಗಿ ಕಾಣಲೆಂದೋ ಅಳವಡಿಸಿಲ್ಲ. ಈ ಟೈಲ್ಸ್ ಗಳನ್ನು ಅಳವಡಿಸಲು ಪ್ರತ್ಯೇಕ ಕಾರಣವಿದೆ.

ಮೆಟ್ರೋ ಸ್ಟೇಶನ್ ನಲ್ಲಿ ಉಬ್ಬು ತಗ್ಗಿನ ಹಳದಿ ಟೈಲ್ಸನ್ನು ದೃಷ್ಟಿಹೀನರಿಗಾಗಿ ಹಾಕಿರುತ್ತಾರೆ. ಟೈಲ್ಸ್ ಉಬ್ಬು ತಗ್ಗು ಇರುವುದರಿಂದ ಅಂಧರಿಗೆ ನಡೆದಾಡಲು ಸುಲಭವಾಗುತ್ತದೆ. ಗೋಲಾಕಾರದ ಟೈಲ್ಸ್ ನಿಲ್ಲುವ ಸೂಚನೆ ನೀಡುತ್ತದೆ. ಉದ್ದನೆಯ ಟೈಲ್ಸ್ ಚಲಿಸುವ ಸೂಚನೆ ನೀಡುತ್ತದೆ. ಇದಕ್ಕೆ ಟೆಕ್ಟೈಲ್ ಪಾಥ್ ಎನ್ನುತ್ತಾರೆ.

ಮೆಟ್ರೋ ಸ್ಟೇಶನ್ ನಲ್ಲಿ ಇಂತಹ ಉಬ್ಬು ತಗ್ಗಿನ ಟೈಲ್ಸ್ ಅಳವಡಿಸಲು ಇನ್ನೊಂದು ಕಾರಣವಿದೆ. ಅದೇನೆಂದರೆ ಅಲ್ಲಿ ನಾನಾ ವಿಧದ ಕೇಬಲ್, ಪೈಪ್ ಮತ್ತು ತಂತಿಯನ್ನು ಈ ಟೈಲ್ಸ್ ಗಳ ಅಡಿಯಲ್ಲೇ ಎಳೆದಿರುತ್ತಾರೆ. ಹೀಗೆ ಮಾಡುವುದರಿಂದ ತಂತಿಗಳಲ್ಲಿ ಏನಾದರೂ ತೊಂದರೆ ಆದಲ್ಲಿ ಟೈಲ್ಸ್ ಅನ್ನು ಸಲೀಸಾಗಿ ತೆಗೆದು, ಕೆಲಸ ಮುಗಿದ ನಂತರ ಟೈಲ್ಸ್ ಗಳನ್ನು ಮೊದಲಿನಂತೆಯೇ ಅಳವಡಿಸಲಾಗುತ್ತದೆ.

ಮೆಟ್ರೋ ಸ್ಟೇಶನ್ ನಲ್ಲಿ ಅಂಧರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವರಿಗೆ ಮೆಟ್ಟಿಲ ಬದಲಾಗಿ ರಾಂಪ್ ಮತ್ತು ಹ್ಯಾಂಡ್ರೆಲ್  ಇರುತ್ತದೆ. ಇವುಗಳ ಸಹಾಯದಿಂದ ಕುರುಡರು ಸುಲಭವಾಗಿ ನಡೆಯಬಹುದು. ಕುರುಡರಿಗಾಗಿ ಪ್ರತ್ಯೇಕ ಸೀಟ್ ವ್ಯವಸ್ಥೆ, ಲಿಫ್ಟ್ ಗಳಲ್ಲಿ ಬ್ರೇಲ್ ಲಿಪಿ ಮತ್ತು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕೂಡ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read