HomeBeautyಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಮುಖದ ಮೇಲಿನ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ

ಹುಡುಗಿಯರ ಮುಖದ ಮೇಲೆ ಅನವಶ್ಯಕ ಕೂದಲಿದ್ದರೆ ಅದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾರ್ಮೋನ್ ಏರುಪೇರು ಸೇರಿದಂತೆ ಅನೇಕ ಕಾರಣಗಳಿಗೆ ಮುಖದ ಮೇಲೆ ಕೂದಲು ಬೆಳೆಯುತ್ತದೆ. ಮುಖದ ಕೂದಲನ್ನು ಎಷ್ಟು ಕತ್ತರಿಸಿದ್ರೂ ಅದು ಮತ್ತೆ ಮತ್ತೆ ಬರುತ್ತದೆ. ಪದೇ ಪದೇ ಪಾರ್ಲರ್ ಗೆ ಹೋಗುವುದ್ರಿಂದ ಖರ್ಚು ಹೆಚ್ಚಾಗುತ್ತದೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ, ಮುಖದ ಮೇಲಿರುವ ಅನವಶ್ಯಕ ಕೂದಲನ್ನು ತೆಗೆಯಬಹುದು.

ಮನೆಯಲ್ಲಿರುವ ಟೂತ್ ಪೇಸ್ಟ್ ನಿಂದ ಅನವಶ್ಯಕ ಕೂದಲನ್ನು ತೆಗೆಯಬಹುದು. ಸುವಾಸನೆಯಿರುವ ಟೂತ್ ಪೇಸ್ಟ್ ಬಳಸಬೇಡಿ. ಇದಕ್ಕೆ ಒಂದು ಚಮಚ ಟೂತ್ ಪೇಸ್ಟ್, ಒಂದು ಚಮಚ ಕಡಲೆ ಹಿಟ್ಟು, 4-5 ಚಮಚ ಹಾಲು ಬೇಕಾಗುತ್ತದೆ.

ಒಂದು ಪಾತ್ರೆಗೆ ಟೂತ್ ಪೇಸ್ಟ್, ಕಡಲೆ ಹಿಟ್ಟು, ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಹೆಚ್ಚು ದಪ್ಪಗಿರಬಾರದು. ಮಾರುಕಟ್ಟೆಯಲ್ಲಿ ಸಿಗುವ ಹೇರ್ ರಿಮೂವರ್ ಕ್ರೀಮ್ ನಂತಿರಲಿ. ಈ ಮಿಶ್ರಣವನ್ನು ಮುಖದ ಕೂದಲಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದು ಒಣಗಿನ ನಂತ್ರ ಹತ್ತಿಯಲ್ಲಿ ನಿಧಾನವಾಗಿ ಉಜ್ಜಿ. ಮುಖವನ್ನು ತೊಳೆದು ಮಾಯಿಶ್ಚರೈಸರ್ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular