HomeHealthಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ 'ಗ್ಯಾಸ್ಟ್ರಿಕ್' ಗೆ ಹೇಳಿ ಗುಡ್ ಬೈ

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ ತುಂಬಿದೆ. ಇದರ ನೀರು, ತೂಕ ನಿಯಂತ್ರಣಕ್ಕೆ ಸಹಕಾರಿ.

ಅಜ್ವೈನ್ ಪ್ರೋಟೀನ್, ಕೊಬ್ಬು, ಖನಿಜ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ ಗಳಿಂದ ಕೂಡಿದೆ. ಕ್ಯಾಲ್ಸಿಯಂ, ರಿಬೋಫ್ಲಾವಿನ್, ಫಾಸ್ಪರಸ್, ಕಬ್ಬಿಣ ಮತ್ತು ನಿಯಾಸಿನ್ ಕಂಡುಬರುತ್ತದೆ.

ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳಿಗ್ಗೆ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಬೇಗ ತೂಕ ಇಳಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಾರೋಗ್ಯಕರ ಆಹಾರದಿಂದಾಗಿ, ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿದೆ. ಗ್ಯಾಸ್ಟ್ರಿಕ್ ಅನೇಕ ಹೊಸ ಅನಾರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು, ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡಬೇಕು. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.

ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಅನುಭವಿಸುವ ಮಹಿಳೆಯರು ಅಜ್ವೈನದ ನೀರು ಕುಡಿಯಬಹುದು. ಮುಟ್ಟಿನ ನೋವು ನಿವಾರಿಸುವ ಶಕ್ತಿ ಅಜ್ವೈನದ ನೀರಿಗಿದೆ.

For Latest News Updates, Join Our Whatsapp Community🚩
RELATED ARTICLES

Most Popular