HomeBeautyಫಳಫಳ ಹೊಳೆಯುವ ಮುಖ ನಿಮ್ಮದಾಗಬೇಕಾ.....? ಹಾಗಿದ್ರೆ ಮನೆಯಲ್ಲೇ ಮಾಡಿ ಈ ಫೇಸ್ ಪ್ಯಾಕ್

ಫಳಫಳ ಹೊಳೆಯುವ ಮುಖ ನಿಮ್ಮದಾಗಬೇಕಾ…..? ಹಾಗಿದ್ರೆ ಮನೆಯಲ್ಲೇ ಮಾಡಿ ಈ ಫೇಸ್ ಪ್ಯಾಕ್

ಮನೆಯಲ್ಲಿ ಇದ್ದು ಇದ್ದು ಮುಖ ಡಲ್ ಆಗಿದೆ ಅಂತಾ ಚಿಂತಿಸುತ್ತಿದ್ದೀರಾ..? ಅಥವಾ ಬ್ಯೂಟಿಪಾರ್ಲರ್ ಗೆ ದುಡ್ಡು ಹಾಕಿ ಸುಸ್ತಾಯಿತಾ..? ಚಿಂತೆಬಿಡಿ ಮನೆಯಲ್ಲಿ ಸಿಂಪಲ್ ಆಗಿ ಈ ರೀತಿ ಫೇಸ್ ಪ್ಯಾಕ್ ಹಾಕಿಕೊಳ್ಳಿ. ನಿಮ್ಮ ಮುಖದ ಕಾಂತಿ ಬದಲಾಗಿ ಬೆಳ್ಳಗೆ ಹೊಳೆಯುತ್ತದೆ. ಮನೆಯಲ್ಲೇ ಇರುವಂತಹ ಸಾಮಾಗ್ರಿಗಳಿಂದ ಮಾಡಿಕೊಳ್ಳಿ. ಏನೆಲ್ಲಾ ಬೇಕು, ಹೇಗೆ ಮಾಡೋದು ಬನ್ನಿ ನೋಡೋಣ.

ಮೂರು ಟೀ ಸ್ಪೂನ್ ಕಡಲೇಹಿಟ್ಟು ತೆಗೆದುಕೊಳ್ಳಿ (ಇದು ಮುಖದಲ್ಲಿರುವ ಎಣ್ಣೆ ಅಂಶ ತೆಗೆಯಲು ಸಹಕಾರಿ). ನಂತರ ಅರ್ಧ ಟೊಮ್ಯಾಟೋವನ್ನು ತುರಿದು ಕಡಲೇಹಿಟ್ಟಿಗೆ ಸೇರಿಸಿಕೊಳ್ಳಿ. ಬಳಿಕ ಇದಕ್ಕೆ 2 ಟೀ ಸ್ಪೂನ್ ಹಸಿ ಹಾಲು ಸೇರಿಸಿ, ನಂತರ 1 ಟೀ ಸ್ಪೂನ್ ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಮುಖದ ಕಾಂತಿ ಹೆಚ್ಚಿಸಲು ಅರಶಿನ ತುಂಬಾ ಸಹಕಾರಿ. ನಂತರ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 10 ರಿಂದ 15 ನಿಮಿಷ ಹಾಗೆ ಬಿಡಿ. ಪೂರ್ತಿ ಒಣಗಿದ ಮೇಲೆ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ. ಬಳಿಕ ಕಾಟನ್ ಬಟ್ಟೆಯಿಂದ ನಿಧಾನಕ್ಕೆ ಮುಖ ಒರೆಸಿಕೊಳ್ಳಿ. ಬಳಿಕ ಐಸ್ ಕ್ಯೂಬ್ ನಿಂದ ಸ್ಕ್ರಬ್ ಮಾಡಿಕೊಳ್ಳಿ. ವಾರದಲ್ಲಿ 2 ರಿಂದ 3 ಬಾರಿ ಈ ತರ ಮಾಡುವುದರಿಂದ ಮುಖ ಬೆಳ್ಳಗೆ ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular