ಮೊಸರು ಭಾರತೀಯರ ಪ್ರಮುಖ ಆಹಾರ ಪದಾರ್ಥ. ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುತ್ತೆ. ಅಷ್ಟೆ ಅಲ್ಲ ಇದರಲ್ಲಿ ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕ ಅಂಶವೂ ಇವೆ. ಮೊಸರನ್ನ ಹೀಗೆ ಉಪಯೋಗಿಸಿದರೆ ಲಾಭ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ದೇಹದ ತೂಕ ಕಡಿಮೆ ಮಾಡಬೇಕೆಂದರೆ ಜಿರಿಗೆ ಬೆರೆಸಿದ ಮೊಸರನ್ನ ತಿನ್ನಿ. ಜೀರಿಗೆ ಬೀಜಗಳನ್ನ ಹುರಿದು ರುಬ್ಬಿ ಮೊಸರಿನಲ್ಲಿ ಬೆರೆಸಿ ಪ್ರತಿದಿನ ಒಂದು ಲೋಟ ಕುಡಿದರೆ ತೂಕ ಕಡಿಮೆಯಾಗುತ್ತದೆ.
ಬಾಯಲ್ಲಿ ಗುಳ್ಳೆಗಳಾಗಿದ್ದರೆ ಒಂದು ಚಮಚ ಜೇನುತುಪ್ಪವನ್ನು ಮೊಸರಿಗೆ ಬೆರಿಸಿ ತಿನ್ನಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಗಾಯವನ್ನು ಶೀಘ್ರವೇ ಗುಣ ಮಾಡುತ್ತದೆ. ಅಲ್ಲದೇ ಹೊಟ್ಟೆ ಸಹ ತಂಪಾಗಿರುತ್ತೆ.
ಮೊಸರು ಮತ್ತು ಸಕ್ಕರೆಯನ್ನು ಬೆರೆಸಿ ತಿಂದರೆ, ಕಫದ ಸಮಸ್ಯೆ ಶೀಘ್ರವೇ ದೂರವಾಗುತ್ತೆ. ಅಲ್ಲದೇ ನಿಶ್ಯಕ್ತಿಯನ್ನ ಸಹ ದೂರ ಮಾಡುತ್ತೆ.
ಆ್ಯಸಿಡಿಟಿ ಸಮಸ್ಯೆ ಇದ್ದರೆ, ಮೊಸರಿನಲ್ಲಿ ರಾಕ್ ಉಪ್ಪನ್ನು ಬೆರೆಸಿ ತಿನ್ನಬೇಕು. ಇದು ದೇಹದಲ್ಲಿನ ಆಮ್ಲ ಮಟ್ಟವನ್ನು ಸಮತೋಲನಗೊಳಿಸುತ್ತದೆ.
ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಿಕೊಳ್ಳಬೇಕಾದರೆ, ಬಾಳೆಹಣ್ಣು ಬೆರೆಸಿದ ಮೊಸರು ತಿನ್ನಬೇಕು. ಇವೆರಡನ್ನೂ ಒಟ್ಟಿಗೆ ತಿನ್ನುವುದರಿಂದ ಕೊಬ್ಬು ಕರಗುವುದರ ಜೊತೆಗೆ ಕೊಲೆಸ್ಟ್ರಾಲ್ ಸಹ ಕಡಿಮೆಯಾಗುತ್ತದೆ. ಹೃದಯ ಸಂಬಂಧಿತ ಸಮಸ್ಯೆ ದೂರ ಮಾಡುತ್ತವೆ.
ಮಲಬದ್ಧತೆಯ ಸಮಸ್ಯೆ ಇದ್ದವರು ಕರಿಮೆಣಸಿನೊಂದಿಗೆ ಬೆರೆಸಿದ ಮೊಸರನ್ನು ತಿನ್ನಬೇಕು. ಮೊಸರಿನಲ್ಲಿರುವ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಮತ್ತು ಕರಿಮೆಣಸಿನಲ್ಲಿರುವ ಪೈಪರೀನ್ ಮಲಬದ್ಧತೆಯನ್ನು ನಿವಾರಿಸುತ್ತವೆ.