HomeLatest Newsಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿ ಹೊಸ ತಿಂಡಿ ಪ್ರಯತ್ನ ಮಾಡ್ತಿದ್ದರೆ ಮಾಡಿ 'ಬ್ರೆಡ್...

ಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿ ಹೊಸ ತಿಂಡಿ ಪ್ರಯತ್ನ ಮಾಡ್ತಿದ್ದರೆ ಮಾಡಿ ‘ಬ್ರೆಡ್ ದಹಿ ವಡಾ’

 

ಸಾಮಾನ್ಯವಾಗಿ ಅದೇ ಅದೇ ತಿಂಡಿ ತಿಂದು ಬೇಸರವಾಗಿರುತ್ತೆ. ಹೊಸ ತಿಂಡಿ ಪ್ರಯತ್ನಕ್ಕೆ ಕೈ ಹಾಕುವವರು ಬ್ರೆಡ್ ದಹಿ ವಡಾ ಮಾಡಬಹುದು.

ಬ್ರೆಡ್ ದಹಿ ವಡಾಕ್ಕೆ ಬೇಕಾಗುವ ಪದಾರ್ಥ :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

10 ಬ್ರೆಡ್ ತುಂಡುಗಳು

250 ಗ್ರಾಂ ಮೊಸರು

ಸ್ವಲ್ಪ ಪನ್ನೀರ್

ಕರಿಯಲು ಎಣ್ಣೆ

ಪುದೀನ ಸ್ವಲ್ಪ

ಒಂದು ಚಿಟಕಿ ಜೀರಿಗೆ ಪುಡಿ

ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು

1/2 ಚಮಚ ಕೆಂಪು ಮೆಣಸಿನ ಪುಡಿ

1/2 ಚಮಚ ಆಮ್ಚೂರ್ ಪುಡಿ

ಬ್ರೆಡ್ ದಹಿ ವಡಾ ಮಾಡುವ ವಿಧಾನ :

ಬ್ರೆಡ್ನ ಅಂಚುಗಳನ್ನು ಕತ್ತರಿಸಿ ಬೇರ್ಪಡಿಸಿ. ಬ್ರೆಡನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ತಕ್ಷಣ ಹಿಂಡಿರಿ. ಹಿಸುಕಿದ ಪನೀರ್ ಗೆ ಈ ಬ್ರೆಡ್ ತುಂಡುಗಳನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಕೆಂಪು ಮೆಣಸಿನಕಾಯಿ, ಉಪ್ಪು ಮತ್ತು ಆಮ್ಚೂರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.

ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಚಪ್ಪಟೆ ಮಾಡಿ ಬಿಸಿ ಮಾಡಿದ ಎಣ್ಣೆಯಲ್ಲಿ ಕರಿಯಿರಿ. ಇನ್ನೊಂದು ಪಾತ್ರೆಗೆ ಮೊಸರನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಹುರಿದ ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತ್ರ ತಯಾರಾದ ವಡಾ ಮೇಲೆ ಮೊಸರು ಸುರಿಯಿರಿ. ಜೀರಿಗೆ ಪುಡಿ, ಪುದೀನ ಎಲೆಯಿಂದ ಅಲಂಕರಿಸಿ.

For Latest News Updates, Join Our Whatsapp Community🚩
RELATED ARTICLES

Most Popular