ಈಗಿನ ಕೆಲಸದ ಶೈಲಿಯಿಂದಾಗಿ ಸಾಮಾನ್ಯವಾಗಿ ಅನೇಕರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನೇಕರಿಗೆ ಹೊಟ್ಟೆಯಲ್ಲಿ ಅಗಾಧ ಪ್ರಮಾಣದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಈ ರೀತಿ ಸಮಸ್ಯೆಗಳಿಂದ ಸಾರ್ವಜನಿಕ ಪ್ರದೇಶದಲ್ಲಿ ನಗೆಪಾಟಲೀಗೀಡಾಗುವ ಸಂದರ್ಭ ಎದುರಾಗಬಹುದು, ಹಾಗಾದರೆ ಈ ಹೊಟ್ಟೆ ಬೊಜ್ಜನ್ನ ಕರಗಿಸಲು ಏನು ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಹೊಟ್ಟೆಯ ಬೊಜ್ಜನ್ನ ಕರಗಿಸಬೇಕು ಅಂದರೆ ನೀವು ಆದಷ್ಟು ನೀರನ್ನ ಕುಡಿಯಬೇಕು. ಇದು ಹೊಟ್ಟೆಯ ಬೊಜ್ಜು ಮಾತ್ರವಲ್ಲದೇ ದೇಹದಲ್ಲಿರುವ ಬೊಜ್ಜನ್ನ ಕರಗಿಸೋಕೆ ಸಹಕಾರಿ. ಇದು ಕೊಬ್ಬನ್ನ ಕರಗಿಸೋದು ಮಾತ್ರವಲ್ಲದೇ ದೇಹದಲ್ಲಿರುವ ವಿಷಕಾರಿ ಅಂಶವನ್ನೂ ತೊಡೆದು ಹಾಕಲಿದೆ.
ಮಾಂಸಹಾರಿ ಭಕ್ಷ್ಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಮಸಾಲೆ ಪದಾರ್ಥಗಳನ್ನ ಹಾಕಿ ಮಾಡಿದ ಮಾಂಸಹಾರ ಭಕ್ಷ್ಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ದೇಹಕ್ಕೆ ಸೇರುತ್ತೆ. ನೀವು ನಿಜವಾಗಿಯೂ ತೂಕ ಇಳಿಸಬೇಕು ಎಂದುಕೊಂಡಿದ್ದಲ್ಲಿ ಮಾಂಸಾಹಾರ ಸೇವನೆ ಮಾಡಲೇಬೇಡಿ.
ಹಣ್ಣುಗಳು ಹಾಗೂ ಹಸಿರು ತರಕಾರಿಗಳನ್ನ ಅಗಾಧ ಪ್ರಮಾಣದಲ್ಲಿ ಸೇವನೆ ಮಾಡಿ. ಬೆಳಗ್ಗೆ, ಸಂಜೆ ಹೊತ್ತಲ್ಲಿ ಹಣ್ಣು ಹಾಗೂ ತರಕಾರಿಗಳನ್ನ ಸೇವನೆ ಮಾಡಿ. ಆದರೆ ರಾತ್ರಿ ಊಟವಾದ ಬಳಿಕ ಹಣ್ಣಿನ ಸೇವನೆ ಮಾಡಬೇಡಿ.
ಬೇಕರಿ ತಿನಿಸುಗಳು, ಜಂಕ್ ಫುಡ್, ಸಕ್ಕರೆ ಹಾಕಿರುವ ಯಾವುದೇ ಪದಾರ್ಥಗಳನ್ನ ಕಣ್ಣೆತ್ತಿಯೂ ನೋಡಬೇಡಿ. ಸ್ಥೂಲಕಾಯದ ಸಮಸ್ಯೆ ಎದುರಾಗುವಲ್ಲಿ ಸಕ್ಕರೆ ಅಂಶದ ಪಾತ್ರ ತುಂಬಾನೇ ಇರೋದ್ರಿಂದ ಇದನ್ನ ನೀವು ತ್ಯಜಿಸಲೇಬೇಕು.
ಆಹಾರ ಕ್ರಮದಲ್ಲಿ ನಿಯಂತ್ರಣ ಮಾಡೋದ್ರ ಜೊತೆಗೆ ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ. ವಾಕಿಂಗ್ ಹಾಗೂ ಜಾಗಿಂಗ್ ಅಭ್ಯಾಸ ರೂಢಿಸಿಕೊಳ್ಳಿ.