ತಲೆಯ ನೆತ್ತಿಯ ಭಾಗದಲ್ಲಿ ತಲೆಹೊಟ್ಟು ಹೆಚ್ಚಾಗಲು ಮುಖ್ಯ ಕಾರಣ ಎಂದರೆ ಶಿಲೀಂಧ್ರಗಳ ಸೋಂಕು. ಇದರ ನಿವಾರಣೆಗೆ ಟೊಮೆಟೋ ಹಣ್ಣನ್ನು ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ?
ಮೊದಲಿಗೆ ಒಂದು ಟೊಮೆಟೋ ಹಣ್ಣನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಿರಿ. ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರಸವನ್ನು ಸೋಸಿ ಒಂದು ತಟ್ಟೆಗೆ ಹಾಕಿಕೊಳ್ಳಿ.
ಶುದ್ಧವಾದ ತೆಂಗಿನ ಎಣ್ಣೆಯ 4 ಹನಿಗಳನ್ನು ಇದಕ್ಕೆ ಬೆರೆಸಿ. ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಹಾಗೆ ಬಿಡಿ.
ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಯಾವುದೇ ರಾಸಾಯನಿಕ ಮಿಶ್ರಿತ ಶಾಂಪು ಗಳನ್ನು ಬಳಸದಿರಿ. ಅಗತ್ಯವಿದ್ದರೆ ಮಾತ್ರ ಮೈಲ್ಡ್ ಆಗಿರುವ ಸೋಪುಗಳನ್ನು ಬಳಸಿ.
ಟೊಮೆಟೊ ನಮ್ಮ ದೇಹದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗಾಗಿ ತಲೆಹೊಟ್ಟಿನ ಸಮಸ್ಯೆಯನ್ನು ದೂರಮಾಡುತ್ತದೆ ಎನ್ನಲಾಗಿದೆ. ಹಾಗಿದ್ದರೆ ತಡ ಯಾಕೆ ಇಂದೇ ಟೊಮೆಟೊ ಜ್ಯೂಸ್ ಮಾಡಿ ಹಚ್ಚಿಕೊಳ್ಳಿ. ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ.