ಕೂದಲು ಬೆಳ್ಳಗಾದ್ರೆ ವಯಸ್ಸಾಯ್ತು ಎಂಬ ನಂಬಿಕೆ ಹಿಂದಿನ ಕಾಲದಲ್ಲಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಕೂದಲು ಕೂಡ ಬೆಳ್ಳಗಾಗ್ತಿದೆ. ಬಿಳಿ ಕೂದಲು ಮುಜುಗರಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನಶೈಲಿ, ಕಲುಷಿತ ಆಹಾರ, ರಾಸಾಯನಿಕ ಶ್ಯಾಂಪೂಗಳ ಬಳಕೆ ಕೂದಲು ಬಿಳಿಯಾಗಲು ಕಾರಣವಾಗುತ್ತದೆ. ಈ ಸಮಸ್ಯೆಗೆ ಕೆಲ ಎಣ್ಣೆ ಪ್ರಯೋಜನಕಾರಿ.
ಕೂದಲು ಬಿಳಿಯಾಗುವುದನ್ನು ತಡೆಯಲು ತೆಂಗಿನ ಎಣ್ಣೆ ಮತ್ತು ಗೋರಂಟಿ ಬಹಳ ಪರಿಣಾಮಕಾರಿ. ಗೋರಂಟಿ ಕಂದು ಬಣ್ಣವು ಕೂದಲಿನ ಬೇರುಗಳನ್ನು ತಲುಪುತ್ತದೆ. ಇದು ಕೂದಲಿನ ಬಣ್ಣವನ್ನು ಬದಲಿಸುತ್ತದೆ. ತೆಂಗಿನ ಎಣ್ಣೆ, ಗೋರಂಟಿ ಕೂದಲ ಬೇರುಗಳನ್ನು ತಲುಪಲು ಸಹಾಯ ಮಾಡುತ್ತದೆ. 3-4 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ ಮತ್ತು ಅದರಲ್ಲಿ ಗೋರಂಟಿ ಎಲೆಗಳನ್ನು ಹಾಕಿ. ಎಣ್ಣೆ ಕಂದು ಬಣ್ಣ ಬರುವವರೆಗೆ ಕುದಿಸಿ ನಂತರ ಎಣ್ಣೆಯನ್ನು ತಣ್ಣಗಾಗಿಸಿ ಕೂದಲಿನ ಬೇರುಗಳಿಗೆ ಹಚ್ಚಿ. ಕನಿಷ್ಠ 40 ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ.
ಕ್ಯಾಸ್ಟರ್ ಆಯಿಲ್ ಉತ್ತಮ ಪ್ರಮಾಣದ ಪ್ರೋಟೀನ್ ಹೊಂದಿರುತ್ತದೆ. ಇದು ಕೂದಲು ಒಡೆಯುವುದನ್ನು ತಡೆಯುತ್ತದೆ. ಸಾಸಿವೆ ಎಣ್ಣೆಯಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಕ್ಯಾಲ್ಸಿಯಂ ಇದ್ದು, ಇದು ಕೂದಲನ್ನು ಆರೋಗ್ಯಕರಗೊಳಿಸುತ್ತದೆ. 1 ಚಮಚ ಕ್ಯಾಸ್ಟರ್ ಆಯಿಲ್ ಗೆ 2 ಟೀ ಚಮಚ ಸಾಸಿವೆ ಎಣ್ಣೆ ಬೆರೆಸಿ ಕೆಲವು ಸೆಕೆಂಡುಗಳ ಕಾಲ ಬಿಸಿ ಮಾಡಿ. ಎಣ್ಣೆ ತಣ್ಣಗಾದ ನಂತರ ಕೂದಲಿನ ಬೇರುಗಳಿಗೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಕನಿಷ್ಠ 45 ನಿಮಿಷಗಳ ಕಾಲ ಬಿಟ್ಟು ನಂತ್ರ ತೊಳೆಯಿರಿ.