ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ……? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು ಕುಡಿಯುವುದ್ರಿಂದ ಬೇರೆ ಬೇರೆ ಪ್ರಯೋಜನ ಸಿಗುತ್ತದೆ. ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೀವು ಯಾವ ಸಮಯದಲ್ಲಿ ಹಾಲು ಸೇವನೆ ಮಾಡಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ.

ದಿನವನ್ನು ಉತ್ತಮವಾಗಿ ಪ್ರಾರಂಭಿಸಲು ಬಯಸಿದರೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಹಾಲನ್ನು ಸೇವಿಸಿರಿ. ಹಾಲಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಪ್ರೋಟೀನ್ ಮತ್ತು ವಿಟಮಿನ್ ಗಳಂತಹ ಪೋಷಕಾಂಶಗಳಿವೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ದಿನಪೂರ್ತಿ ಶಕ್ತಿ ಸಿಗುತ್ತದೆ. ಕೆಲವರಿ ಬೆಳಿಗ್ಗೆ ಹಾಲು ಕುಡಿಯುವುದು ಹೊಟ್ಟೆ ಭಾರದ ಅನುಭವ ನೀಡುತ್ತದೆ. ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತದೆ. ಹೊಟ್ಟೆ ನೋವು ಸಹ ಬರಬಹುದು.

ಇನ್ನು ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ನಿದ್ದೆ ಮಾಡುವಾಗ ಹಸಿವು ಕಾಡುವುದಿಲ್ಲ. ನಿದ್ರೆಗೆ ತೊಂದರೆಯಾಗುವುದಿಲ್ಲ. ಹಾಲು ಮೆದುಳಿನಲ್ಲಿರುವ ಒತ್ತಡದ ವಿರುದ್ಧ ಹೋರಾಡುತ್ತದೆ. ಇದರಿಂದ ಆಯಾಸ ಮಾಯವಾಗಿ ನಿದ್ರೆ ಬರುತ್ತದೆ. ಚರ್ಮದ ಕಾಂತಿ ಬಯಸುವವರು ರಾತ್ರಿ ಹಾಲು ಕುಡಿದು ನಿದ್ರೆ ಮಾಡಬೇಕು.

ಲ್ಯಾಕ್ಟೋಸ್ ಸಮಸ್ಯೆ ಇರುವ ಜನರಿಗೆ ಹೊಟ್ಟೆ ನೋವು ಕಾಡುತ್ತದೆ. ರಾತ್ರಿ  ಹಾಲು ಕುಡಿಯುವುದರಿಂದ ದೇಹದ ಇನ್ಸುಲಿನ್ ಮಟ್ಟವೂ ಹೆಚ್ಚಾಗುತ್ತದೆ. ಹಾಗಾಗಿ ನಿಮ್ಮ ದೇಹ ಪ್ರಕೃತಿ ನೋಡಿ ನೀವು ಯಾವ ಸಮಯದಲ್ಲಿ ಹಾಲು ಕುಡಿಯಬೇಕೆಂಬುದನ್ನು ನಿರ್ಧರಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read