ಬೇಸಿಗೆಯಲ್ಲಿ ಹಲವು ರೀತಿಯ ಅಲರ್ಜಿ ಸಮಸ್ಯೆಗಳು ಕಾಡುತ್ತವೆ. ಕೆಲವೊಮ್ಮೆ ಇದು ಮತ್ತೂ ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದು.
ಕಣ್ಣುಗಳ ಕೆಳಭಾಗದ ಕಪ್ಪುವರ್ತುಲ ಗಾಢವಾಗುತ್ತಾ ಹೋದಾಗ, ದೇಹಕ್ಕೆ ವಿಪರೀತ ಸುಸ್ತು ಎನಿಸಿದಾಗ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಮನೆಯಲ್ಲೇ ಔಷಧ ಮಾಡುವ ಬದಲು ವೈದ್ಯರನ್ನು ಕಾಣುವುದು ಬಹಳ ಒಳ್ಳೆಯದು.
ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಿ ಈಜುಕೊಳದಲ್ಲಿ ಸಮಯ ಕಳೆಯುವವರೇ ಹೆಚ್ಚು. ಆದರೆ ಇಲ್ಲಿನ ನೀರಿಗೆ ಕ್ಲೋರಿನ್ ಬೆರೆಸಿರುತ್ತಾರೆ. ಇದು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು.
ಸೊಳ್ಳೆಗಳ ಅಲರ್ಜಿ ಇದ್ದರೆ ನೀವು ಸಂಜೆ ಹೊತ್ತು ಮನೆಯೊಳಗೆ ಇರುವುದೇ ಒಳ್ಳೆಯದು. ಸೊಳ್ಳೆಗಳು ಸಂಜೆ ಹೊತ್ತಿಗೆ ಮನೆಸುತ್ತ ಹಾರಾಡುತ್ತಿರುತ್ತವೆ ಮತ್ತು ಇವು ಕಚ್ಚಿದ ಬಳಿಕ ವಿಪರೀತ ತುರಿಕೆ ಉಂಟಾಗಿ ತ್ವಚೆಯ ಮೇಲೆ ಶಾಶ್ವತ ಕಲೆಗಳು ಮೂಡುವ ಸಾಧ್ಯತೆಯೂ ಇದೆ.