HomeHealthಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ?

ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ ಒಂದು ಚಮಚ ಪುಡಿಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ತ್ರಿಫಲಾ ಪುಡಿ ಎಲ್ಲಾ ಆಯುರ್ವೇದದ ಮಳಿಗೆಗಳಲ್ಲಿ ಲಭ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರೀನ್ ಟೀ ಸೇವನೆಯಿಂದಲೂ ಹಸಿವು ಹೆಚ್ಚಿಸಿಕೊಳ್ಳಬಹುದು. ಹಲವಾರು ರೋಗಗಳನ್ನು ನಿವಾರಿಸುವ ಶಕ್ತಿಯೂ ಗ್ರೀನ್ ಟೀಗಿದೆ. ಬೆಳಿಗ್ಗೆ ಸಂಜೆ ಚಹಾ-ಕಾಫಿ ಕುಡಿಯುವವರು ಗ್ರೀನ್ ಟೀ ಗೆ ಬದಲಾಯಿಸಿಕೊಳ್ಳಬಹುದು.

ಪ್ರತಿ ಬಾರಿ ನೀರು ಕುಡಿಯುವುದು ಕಷ್ಟವಾಗುತ್ತದೆ ಎನಿಸಿದಾಗ ನೀರಿಗೆ ನಿಂಬೆರಸ ಹಿಂಡಿ ಸಕ್ಕರೆ ಬೆರೆಸದೆ ಕುಡಿದು ನೋಡಿ. ಬೇಕಿದ್ದರೆ ಜೇನುತುಪ್ಪ ಕೊಂಚ ಸೇರಿಸಿ. ಇದರಿಂದ ಜೀರ್ಣಕ್ರಿಯೆ ಚುರುಕುಗೊಂಡು ಬಹುಬೇಗ ಹಸಿವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular