ಚರ್ಮ ನಿಮ್ಮ ಸೌಂದರ್ಯದ ಗುಟ್ಟನ್ನು ಹೇಳುತ್ತದೆ. ಮೃದುವಾದ ಹೊಳಪಿನ ತ್ವಚೆ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಕೇವಲ ಕ್ರೀಮ್, ಮಾಯಿಶ್ಚರೈಸರ್ ಹಚ್ಚೋದ್ರಿಂದ ನಿಮ್ಮ ಚರ್ಮ ಅಂದ ಪಡೆದುಕೊಳ್ಳಲು ಸಾಧ್ಯವಿಲ್ಲ.
ಸರಿಯಾದ ಆಹಾರವನ್ನು ಸೇವಿಸದೇ ಇದ್ರೆ ನಿಮ್ಮ ಚರ್ಮ ಒಡೆದು ಒರಟೊರಟಾಗಿ ಕಾಣಿಸುತ್ತದೆ. ಕೆಲವೊಂದು ಸೂಪರ್ ಫುಡ್ ಗಳು ನಿಮ್ಮ ಚರ್ಮವನ್ನೇ ಬದಲಾಯಿಸಿ ಚಮತ್ಕಾರ ಮಾಡಬಲ್ಲವು.
ಹೊಳಪು : ಓಟ್ಸ್ ಕೂಡ ಒಂದು ಸೌಂದರ್ಯ ವರ್ಧಕ, ಎಲ್ಲಾ ಬಗೆಯ ಚರ್ಮಕ್ಕೂ ಇದು ಹೊಳಪು ತರಬಲ್ಲದು. ಓಟ್ ಮೀಲ್ ಫೇಸ್ ಪ್ಯಾಕ್ ಹಾಕಿಕೊಂಡ್ರೆ ನಿಮ್ಮ ಮುಖ ಬೆಳ್ಳಗೆ ಕಾಣಿಸುತ್ತದೆ. ಓಟ್ ಮೀಲ್ ಜೊತೆಗೆ ಜೇನುತುಪ್ಪ ಹಾಗೂ ಹಾಲು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ. ನಿಮ್ಮ ಮುಖದಲ್ಲಿರುವ ಜಿಡ್ಡಿನಂಶ, ಡೆಡ್ ಸ್ಕಿನ್ ಗಳೆಲ್ಲ ಮಾಯವಾಗಿ ಮುಖ ಹೊಳಪು ಪಡೆಯುತ್ತದೆ.
ಯಂಗ್ ಆಗಿ ಕಾಣಲು : ಬೆರ್ರಿ ಹಣ್ಣುಗಳು ಆ್ಯಂಟಿ ಒಕ್ಸಿಡೆಂಟ್ ಗಳಂತೆ ಕಾರ್ಯನಿರ್ವಹಿಸುತ್ತವೆ, ಇವು ಆ್ಯಂಟಿ ಏಜಿಂಗ್ ಕೂಡ ಹೌದು. ಒಂದು ಕಪ್ ಸ್ಟ್ರಾಬೆರ್ರಿ ಹಣ್ಣುಗಳನ್ನು acai ಬೆರ್ರಿ ಪೌಡರ್ ಜೊತೆಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ.
ಟೋನ್ ಅಪ್ : ಮುಖದ ಮೇಲಿರುವ ಡೆಡ್ ಸ್ಕಿನ್ ತೆಗೆದು ಹಾಕಲು ಆ್ಯಪಲ್ ಸೈಡರ್ ವಿನಿಗರ್ ಬೆಸ್ಟ್. ಇದು ಅದ್ಭುತ ಟೋನರ್ ಕೂಡ ಹೌದು. ಒಂದು ಟೇಬಲ್ ಸ್ಪೂನ್ ನಷ್ಟು ಆ್ಯಪಲ್ ಸೈಟ್ ವಿನಿಗರ್ ಅನ್ನು ಎರಡು ಕಪ್ ನೀರಿನೊಂದಿಗೆ ಬೆರೆಸಿ ಫ್ರಿಡ್ಜ್ ನಲ್ಲಿಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಎರಡು ಚಮಗಳಷ್ಟನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.
ಮಾಸ್ಕ್ ಬ್ಯೂಟಿ : ಅವೊಕಾಡೊ ಫೇಸ್ ಮಾಸ್ಕ್ ಇತ್ತೀಚೆಗೆ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಅವೊಕಾಡೊನಲ್ಲಿ ವಿಟಮಿನ್ ಎ ಮತ್ತು ಇ ಇದೆ. ನಿಮ್ಮ ಡ್ರೈ ಸ್ಕಿನ್ ಅನ್ನು ಹೋಗಲಾಡಿಸಿ ಮೃದುವಾಗಿಸಲು ಇದು ಸಹಕಾರಿ.
ಹಿತವಾದ ಏಜೆಂಟ್ : ತಂಪಾದ ಗ್ರೀನ್ ಟೀ ಬ್ಯಾಗ್ ಗಳನ್ನು ಮುಖದ ಮೇಲೆ ಇಟ್ಟುಕೊಳ್ಳುವುದರಿಂದ ಸನ್ ಬರ್ನ್ ಹಾಗೂ ಅಲ್ಟ್ರಾವಯೊಲೆಟ್ ಕಿರಣಗಳಿಂದ ನಿಮ್ಮ ಚರ್ಮಕ್ಕಾದ ಹಾನಿಯನ್ನು ಕಡಿಮೆ ಮಾಡಬಹುದು. ಬಳಸಿದ 2 ಗ್ರೀನ್ ಟೀ ಬ್ಯಾಗ್ ಗಳನ್ನು 30 ನಿಮಿಷ ಫ್ರಿಡ್ಜ್ ನಲ್ಲಿಡಿ. ಅದನ್ನು ನಿಮ್ಮ ಮುಚ್ಚಿದ ಕಣ್ಣುಗಳ ಮೇಲಿಟ್ಟುಕೊಳ್ಳಿ, ಇದರಿಂದ ಕಣ್ಣುಗಳ ಸುತ್ತ ಇರುವ ಕಪ್ಪು ವರ್ತುಲ ಮಾಯವಾಗುತ್ತದೆ.
ನೈಸರ್ಗಿಕ ಹೈಡ್ರೇಟರ್ : ಚಿಯಾ ಬೀಜಗಳಲ್ಲಿ ಫೈಬರ್, ಪ್ರೋಟೀನ್ ಹಾಗೂ ವಿಟಮಿನ್ ಇ ಹೇರಳವಾಗಿದೆ. ಹತ್ತಾರು ಕ್ರೀಮ್ ಗಳನ್ನು ಹಚ್ಚುವುದಕ್ಕಿಂತ ನೀವು ಚಿಯಾ ಬೀಜಗಳನ್ನು ನೆಚ್ಚಿಕೊಳ್ಳುವುದು ಬೆಸ್ಟ್. ಚಿಯಾ ಬೀಜಗಳನ್ನು ಪುಡಿಮಾಡಿ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.
ಇದನ್ನೆಲ್ಲ ಮಾಡುವುದರ ಜೊತೆಜೊತೆ ಎಣ್ಣೆ ಹಾಗೂ ಕರಿದ ಪದಾರ್ಥಗಳನ್ನು ದೂರವಿಟ್ಟು, ಹಣ್ಣು, ತರಕಾರಿಯನ್ನು ಹೆಚ್ಚಾಗಿ ಸೇವಿಸಿ. ಸಕ್ಕರೆ, ಮೈದಾ, ಜಂಕ್ ಫುಡ್ ಗಳ ಸೇವನೆ ಕಡಿಮೆ ಮಾಡಿದ್ರೆ ತಂತಾನೇ ನಿಮ್ಮ ಚರ್ಮ ಹೊಳಪು ಪಡೆಯುತ್ತದೆ.