ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ ರುಚಿಯಾದ ಉಪ್ಪಿನಕಾಯಿ ಇದೆ ಟ್ರೈ ಮಾಡಿ.
20 – ಹಸಿಮೆಣಸು, 3 ಟೇಬಲ್ ಸ್ಪೂನ್ – ಧನಿಯಾ ಬೀಜ, 1 – 1 ½ ಟೇಬಲ್ ಸ್ಪೂನ್, ಸೊಂಪು, 1 ಟೀ ಸ್ಪೂನ್ – ಮೆಂತ್ಯಕಾಳು, 1 ಟೀ ಸ್ಪೂನ್ – ಸಾಸಿವೆ, 1/8 ಟೀ ಸ್ಪೂನ್ – ಇಂಗು, 3 ಟೀ ಸ್ಪೂನ್ – ಉಪ್ಪು, ½ ಟೀ ಸ್ಪೂನ್ – ಅರಿಶಿನ, 1 ಟೇಬಲ್ ಸ್ಪೂನ್ – ವಿನೇಗರ್, 2 ಟೇಬಲ್ ಸ್ಪೂನ್ – ಎಣ್ಣೆ.
ಮೊದಲಿಗೆ ಹಸಿಮೆಣಸನ್ನು ಚೆನ್ನಾಗಿ ತೊಳೆದು ಉದ್ದಕ್ಕೆ ಸೀಳಿಕೊಳ್ಳಿ. ಮಿಕ್ಸಿ ಜಾರಿಗೆ ಧನಿಯಾ ಬೀಜ, ಸೋಂಪು, ಮೆಂತ್ಯಕಾಳು ಹಾಕಿ ತರಿತರಿಯಾಗಿ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ. ನಂತರ ಇದಕ್ಕೆ ಉಪ್ಪು, ಅರಿಶಿನ, ಇಂಗು, ಸಾಸಿವೆ ಹಾಕಿ ಮಿಕ್ಸಿ ಮಾಡಿ. ಎಣ್ಣೆ ಬಿಸಿ ಮಾಡಿಕೊಂಡು ಅದನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ವಿನೇಗರ್ ಹಾಕಿ ಮಿಕ್ಸ್ ಮಾಡಿ.
ನಂತರ ಈ ಮಸಾಲಾ ಮಿಶ್ರಣವನ್ನು ಸೀಳಿಟ್ಟುಕೊಂಡ ಹಸಿಮೆಣಸಿನ ಒಳಗೆ ತುಂಬಿ ಒಂದು ಗ್ಲಾಸ್ ಜಾರಿನೊಳಗೆ ಹಾಕಿ ಎರಡು ದಿನ ಹಾಗೇ ಇಡಿ. ನಂತರ ಒಂದು ದಿನ ಸೂರ್ಯನ ಬಿಸಿಲಿಗೆ ಇಡಿ. ಆಮೇಲೆ ಇದನ್ನು ಉಪಯೋಗಿಸಬಹುದು. ಫ್ರಿಡ್ಜ್ ನಲ್ಲಿಟ್ಟುಕೊಂಡು ಬಳಸಬಹುದು.