‘ಗರ್ಭಧರಿಸಲು’ ತಡವಾಗ್ತಿದೆಯಾ….? ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮಗು ಬೇಕು ಎಂಬ ಆಸೆ ಪ್ರತಿ ಹೆಣ್ಣಿಗೂ ಇರುತ್ತದೆ. ಆದರೆ ಈಗಿನ ಆಹಾರ ಪದ್ಧತಿ, ಜೀವನಶೈಲಿಯಿಂದ ದೇಹಾರೋಗ್ಯದಲ್ಲಿ ಏರುಪೇರಾಗಿ ಗರ್ಭ ನಿಲ್ಲುವುದು ತಡವಾಗುತ್ತದೆ. ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಮಗು ಆಗುವುದಿಲ್ಲ. ಇಲ್ಲಿ ಕೆಲವೊಂದು ಟಿಪ್ಸ್ ಇದೆ ಟ್ರೈ ಮಾಡಿ.

ಮೊದಲಿಗೆ ನಿಮ್ಮ ಪಿರಿಯೆಡ್ಸ್ ಸರಿಯಾಗಿ ಆಗುತ್ತಿದೆಯಾ ಎಂದು ಪರೀಕ್ಷಿಸಿ. ಮುಟ್ಟಾಗಿ 14 ಅಥವಾ 15 ದಿನಕ್ಕೆ ಅಂಡಾಣು ಬಿಡುಗಡೆ ಆಗುತ್ತದೆ. ನಿಮ್ಮ ಮುಟ್ಟಿನ ಅವಧಿಯ ಮೇಲೆ ಈ ಅಂಡಾಣು ಬಿಡುಗಡೆ ಸಮಯ ಕೂಡ ನಿರ್ಧಾರವಾಗುತ್ತದೆ. ಇನ್ನು ಈ ಅಂಡಾಣು ಬಿಡುಗಡೆ ಸಮಯದಲ್ಲಿ ಸೇರಿದಾಗ ಗರ್ಭ ನಿಲ್ಲುತ್ತದೆ. ಹಾಗಾಗಿ ಅಂಡಾಣು ಬಿಡುಗಡೆಯನ್ನು ಪರೀಕ್ಷಿಸಲು ಕಿಟ್ ಕೂಡ ಮಾರುಕಟ್ಟೆ ಸಿಗುತ್ತದೆ. ಅದನ್ನು ತಂದು ನೀವು ಪರೀಕ್ಷೆ ಮಾಡಿಕೊಳ್ಳಬಹುದು.

ಇನ್ನು ಮಗು ಬೇಕು ಅಂದ ತಕ್ಷಣ ಅದು ಆಗಲ್ಲ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೂಡ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದಷ್ಟು ಒತ್ತಡಗಳಿಂದ ದೂರವಿರಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಇದು ಕೂಡ ನಿಮಗೆ ಗರ್ಭಧಾರಣೆಗೆ ಸಹಾಯಕಾರಿಯಾಗಿದೆ.

ಥೈರಾಯ್ಡ್ ಟೆಸ್ಟ್ ಮಾಡಿಸಿಕೊಳ್ಳಿ. ಹಾಗೇ ದೇಹ ತೂಕ ಹೆಚ್ಚಿದ್ದರೆ ಅದನ್ನು ಇಳಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇದರ ಜತೆಗೆ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read