ಮಕ್ಕಳಿಗೆ ಹೊರಗಡೆಯಿಂದ ಬಿಸ್ಕೆಟ್ ತಂದು ಕೊಡುತ್ತಿವಿ. ಅದರ ಬದಲು ಮನೆಯಲ್ಲಿ ಮಾಡಿದ್ದು ಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ರುಚಿಯಾಗಿಯೂ ಇರುತ್ತದೆ.
ಬೇಕಾಗುವ ಸಾಮಾಗ್ರಿಗಳು:
1 ಕಪ್- ಗೋಧಿ ಹಿಟ್ಟು, ¼ ಟೀ ಸ್ಪೂನ್-ಏಲಕ್ಕಿ ಪುಡಿ, ಚಿಟಿಕೆ-ಜಾಯಿಕಾಯಿ ಪುಡಿ, ಚಿಟಿಕೆ-ಉಪ್ಪು, 5 ಟೇಬಲ್ ಸ್ಪೂನ್- ತುಪ್ಪ. ¼ ಕಪ್- ಸಕ್ಕರೆ, 4 ಟೇಬಲ್ ಸ್ಪೂನ್-ಹಾಲು.
ಮಾಡುವ ವಿಧಾನ:
ಒಂದು ಬೌಲ್ ಗೆ ಗೋಧಿ ಹಿಟ್ಟು, ಉಪ್ಪು, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ತುಪ್ಪ, ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಗೋಧಿಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ನಂತರ ಹಾಲು ಹಾಕಿ ನಾದಿಕೊಳ್ಳಿ.
ನಂತರ ಇದನ್ನು ತುಸು ದಪ್ಪಗೆ ಲಟ್ಟಿಸಿಕೊಂಡು ಫೋರ್ಕ್ ನ ಸಹಾಯದಿಂದ ಇದರ ಮೇಲೆ ನಿಧಾನಕ್ಕೆ ಚುಚ್ಚಿ. ಚಿಕ್ಕ ಚಿಕ್ಕ ತೂತಿನ ಹಾಗೇ ಕಾಣಿಸುತ್ತದೆ. ನಂತರ ಚೌಕಾಕಾರದಲ್ಲಿ ಕತ್ತರಿಸಿ. ಇದನ್ನು ಬೇಕಿಂಗ್ ಟ್ರೆಯಲ್ಲಿ ಇಟ್ಟು ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.