ಚಳಿಗಾಲದಲ್ಲಿ ಈ ಕೆಲವಷ್ಟು ವಸ್ತುಗಳನ್ನು ಸದಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು ಅವು ಯಾವುವು ಎಂದಿರಾ?
ಸನ್ ಗ್ಲಾಸ್ ಅನ್ನು ನಿಮ್ಮ ಬ್ಯಾಗ್ ನಲ್ಲಿ ಸದಾ ಇಟ್ಟುಕೊಂಡಿರಿ. ಇವು ಸೂರ್ಯನ ನೇರ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತವೆ. ಹಾಗಾಗಿ ಇದು ಸದಾ ನಿಮ್ಮೊಂದಿಗಿರಲಿ.
ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಸಾಮಾನ್ಯವಾದುದು. ಬಿರುಕುಬಿಟ್ಟ ತುಟಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಲಿಪ್ ಬಾಮ್ ಅನ್ನು ಸದಾ ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಕಚೇರಿಯಿಂದ ಕೆಲಸ ಮುಗಿಸಿ ಬರುವಾಗ ತಡವಾದರೆ ವಿಪರೀತ ಚಳಿ ನಿಮ್ಮನ್ನು ಕಾಡಬಹುದು. ಇದರಿಂದ ಮುಕ್ತಿ ಪಡೆಯಲು ಉಲನ್ ಟೊಪ್ಪಿಯೊಂದನ್ನು ಸದಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
ಚಳಿಗಾಲದಲ್ಲಿ ನಿಮ್ಮ ಉಡುಪಿನ ಮೇಲೆ ಸ್ವೆಟರ್ ಹಾಕಲು ಮರೆಯದಿರಿ. ವಿಪರೀತ ಚಳಿ ಇದ್ದರೆ ಗ್ಲೌಸ್, ಸ್ಕಾರ್ಫ್ ಅನ್ನು ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕಾದೀತು. ಹ್ಯಾಂಡ್ ಕ್ರೀಂ, ಮಾಯಿಸ್ಚರೈಸರ್, ಬಾಡಿ ಲೋಷನ್, ಸಾಕ್ಸ್ ಧರಿಸಿ.