ಈ ಮೂರು ಪದಾರ್ಥಗಳನ್ನು ಬೆರೆಸಿ ಹಚ್ಚಿ ಕಲೆ ಮುಕ್ತ ತ್ವಚೆ ಹೊಂದಿ

ಮುಖದಲ್ಲಿ ಮೊಡವೆಗಳಿಂದಾಗಿ ರಂಧ್ರಗಳು ಮೂಡುತ್ತವೆ. ಇದನ್ನು ನಾವು ಮೇಕಪ್ ನಿಂದ ಮರೆಮಾಚಿದರೂ ಕೂಡ ಮೇಕಪ್ ಅಳಿಸಿದ ಬಳಿಕ ಅದು ಕಾಣಿಸುತ್ತದೆ. ಹಾಗಾಗಿ ಈ ರಂಧ್ರಗಳು ಕಣ್ಮರೆಯಾಗಲು ಈ ಮೂರು ಪದಾರ್ಥಗಳನ್ನು ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

½ ಚಮಚ ನಿಂಬೆ ರಸವನ್ನು ತೆಗೆದುಕೊಂಡು ಅದಕ್ಕೆ 1 ಚಮಚ ರೋಸ್ ವಾಟರ್ ಮತ್ತು ½ ಚಮಚ ಸಕ್ಕರೆಯನ್ನು ಸೇರಿಸಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖವನ್ನು ತೊಳೆದು ಒರೆಸಿಕೊಂಡು ಹತ್ತಿಯ ಸಹಾಯದಿಂದ ಇದನ್ನು ಹಚ್ಚಿ 20 ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿ.

ಇದನ್ನು ವಾರದಲ್ಲಿ 2 ಬಾರಿ ಬಳಸಿ. ಇದು ರಂಧ್ರಗಳಲ್ಲಿ ಸೇರಿಕೊಂಡಿರುವ ಕೊಳೆ, ಬ್ಯಾಕ್ಟೀರಿಯಾಗಳನ್ನು ಹೊರ ಹಾಕಿ ರಂಧ್ರವನ್ನು ಮುಚ್ಚಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read