HomeAstroಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ

ಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ

ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕನಸು ನನಸಾಗಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಮನೆ ಕಟ್ಟಲು ಹೊರಟರೆ ಒಂದಲ್ಲಾ ಒಂದು ಸಮಸ್ಯೆ ಬರುತ್ತದೆ. ಹಾಗಾಗಿ ಅಂತವರು ಗುರುವಾರದಂದು ಈ ಪರಿಹಾರವನ್ನು ಮಾಡಿ.

ಸ್ವಗೃಹ ಯೋಗ ನಿಮ್ಮ ಜಾತಕದಲ್ಲಿರಬೇಕು. ಅದು ಸಫಲವಾಗಲು ಪ್ರತಿ ಗುರುವಾರದಂದು ಸ್ನಾನಾಧಿಗಳನ್ನು ಮುಗಿಸಿ ಗುರುಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಬೇಕು. ದೇವರಿಗೆ ಪೂಜೆ ಮಾಡಬೇಕು. ಬಳಿಕ ಆಲೂಗಡ್ಡೆಯನ್ನು ಬೇಯಿಸಿ ಅದಕ್ಕೆ ಚಿಟಿಕೆ ಅರಶಿನ ಹಾಕಿ ಕಲಸಿ 2 ಮುದ್ದೆಗಳನ್ನಾಗಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಅದರಲ್ಲಿ ಒಂದು ಮುದ್ದೆಯನ್ನು ಗೋಮಾತೆಗೆ ತಿನ್ನಿಸಿ ಇನ್ನೊಂದು ಮುದ್ದೆಯನ್ನು ಅರಳೀಮರದ ಕೆಳಗೆ ಹೂತು ನೀರು ಹಾಕಿ ಸಂಕಲ್ಪ ಮಾಡಬೇಕು. ಮನೆಗೆ ಬರುವಾಗ ತಿರುಗಿ ನೋಡಬಾರದು ನೇರವಾಗಿ ಮನೆಗೆ ಬರಬೇಕು. ಇದನ್ನು 7 ಗುರುವಾರ ಮಾಡಿದರೆ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular