ನಿಮ್ಮ ಮೊಬೈಲ್ ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅದರ ಬ್ಯಾಟರಿ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ. ಬ್ಯಾಟರಿ ಕಾಪಾಡಬೇಕು ಅಂದರೆ ಪದೇ ಪದೇ ಬ್ಯಾಟರಿ ಚಾರ್ಜ್ ಮಾಡುವ ವಿಧಾನವನ್ನ ಕೈಬಿಡಬೇಕು.
ಇದರಿಂದ ಮೊಬೈಲ್ ಬ್ಯಾಟರಿ ಹೆಚ್ಚು ಸಮಯದವರೆಗೆ ಬಾಳಿಕೆ ಬರಲಿದೆ. ಹಾಗಾದ್ರೆ ಮೊಬೈಲ್ ಬ್ಯಾಟರಿಯಲ್ಲಿ ಹೆಚ್ಚು ಕಾಲ ಚಾರ್ಜ್ ಉಳಿಯಬೇಕು ಅಂದರೆ ಏನು ಮಾಡಬೇಕು ಅನ್ನೋದಕ್ಕೆ ಒಂದಷ್ಟು ಸಲಹೆ ಇಲ್ಲಿದೆ ನೋಡಿ.
ಮೊಬೈಲ್ನಲ್ಲಿ ಚಾರ್ಜ್ ಉಳಿಯುವಂತೆ ಮಾಡಬೇಕು ಅಂದರೆ ನೀವು ಮೊದಲು ಮೊಬೈಲ್ ಸ್ಕ್ರೀನ್ ಬ್ರೈಟ್ನೆಸ್ನ್ನು ಕಡಿಮೆ ಮಾಡಿ. ಕೇವಲ ಚಾರ್ಜ್ ವಿಚಾರವಾಗಿ ಮಾತ್ರವಲ್ಲದೇ ನಿಮ್ಮ ಕಣ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು.
ಸೆಟ್ಟಿಂಗ್ಸ್ ಗೆ ಹೋಗಿ ಬ್ರೈಟ್ನೆಸ್ನಲ್ಲಿ ಆಟೋಮ್ಯಾಟಿಕ್ ಎಂಬ ಆಯ್ಕೆಯನ್ನ ಆಯ್ದುಕೊಳ್ಳೋದು ಇನ್ನೂ ಒಳ್ಳೆಯದು.
ಮೊಬೈಲ್ ಹಾಗೂ ಮೊಬೈಲ್ನಲ್ಲಿರುವ ಅಪ್ಲಿಕೇಶನ್ಗಳಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನ ಸೆಲೆಕ್ಟ್ ಮಾಡೋದ್ರಿಂದಲೂ ತುಂಬಾನೇ ಉಪಯೋಗವಿದೆ. ಇದರಿಂದಲೂ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸಲಿದೆ. ಅದರಲ್ಲೂ ಮಲಗುವ ವೇಳೆ ಡಾರ್ಕ್ ಮೋಡ್ನಲ್ಲೇ ಮೊಬೈಲ್ ಬಳಕೆ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಸಾಮರ್ಥ್ಯ ಹೆಚ್ಚಲಿದೆ.
ಬ್ಲೂಟೂತ್, ವೈಫೈಗಳು ಕೂಡ ಚಾರ್ಜ್ ಖಾಲಿ ಮಾಡುತ್ತವೆ. ಹೀಗಾಗಿ ಅವಶ್ಯಕತೆ ಇಲ್ಲದ ವೇಳೆಯಲ್ಲಿ ಈ ವೈಫೈ , ಹಾಗೂ ಬ್ಲೂಟೂತ್ ಕನೆಕ್ಷನ್ಗಳನ್ನ ಬಂದ್ ಮಾಡಲು ಮರೆಯದಿರಿ.
ಜಿಪಿಎಸ್ ಕೂಡ ನಿಮ್ಮ ಮೊಬೈಲ್ ಚಾರ್ಜ್ನ್ನು ಕಡಿಮೆ ಮಾಡಬಲ್ಲವು. ಹೀಗಾಗಿ ವೈಫೈ, ಬ್ಲೂಟೂತ್ಗಳಂತೆಯೇ ಅವಶ್ಯಕತೆ ಇದ್ದಾಗ ಮಾತ್ರ ಜಿಪಿಎಸ್ ಆನ್ ಮಾಡಿ.
ಈಗಂತೂ ಎಲ್ಲಾ ಮೊಬೈಲ್ಗಳಲ್ಲೂ ಪವರ್ ಸೇವಿಂಗ್ ಮೋಡ್ ಇದ್ದೇ ಇರುತ್ತೆ. ಇದನ್ನ ಆನ್ ಮಾಡೋದ್ರಿಂದ ಕೂಡ ನಿಮ್ಮ ಬ್ಯಾಟರಿ ಚಾರ್ಜ್ ಬೇಗನೇ ಕಡಿಮೆಯಾಗೋದಿಲ್ಲ.
ಕೆಲವೊಮ್ಮೆ ನಾವೆಷ್ಟೇ ಪ್ರಯತ್ನ ಮಾಡಿದ್ರೂ ಬ್ಯಾಟರಿಗಳು ಹಾಳಾಗಿ ಬಿಡ್ತವೆ. ಮೊಬೈಲ್ ಒಳ್ಳೆಯ ಸ್ಥಿತಿಯಲ್ಲೇ ಇದ್ದು ಬ್ಯಾಟರಿ ಮಾತ್ರ ಹಾಳಾಗಿದೆ ಅನ್ನೋ ವಿಚಾರ ನಿಮ್ಮ ಗಮನಕ್ಕೆ ಬಂದಿದ್ರೆ ಸುಮ್ಮನೇ ಹೊಸ ಮೊಬೈಲ್ಗೆ ಸಿಕ್ಕಾಪಟ್ಟೆ ಹಣವನ್ನ ವ್ಯಯಿಸುವ ಬದಲು ಬ್ಯಾಟರಿಯನ್ನ ಚೇಂಜ್ ಮಾಡೋದು ಒಳ್ಳೆ ಐಡಿಯಾ.