ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹಾಗಾಗಿ ಅದಕ್ಕಾಗಿ ಚರ್ಮವನ್ನು ಸ್ಕ್ರಬ್ ಮಾಡಬೇಕು. ರಾಸಾಯನಿಕಯುಕ್ತ ಸ್ಕ್ರಬ್ ಗಳನ್ನು ಬಳಸುವ ಬದಲು ಕ್ಯಾಮೊಮೈಲ್ ಟೀ ಪೌಡರ್ ನ್ನು ಬಳಸಿ ಸ್ಕ್ರಬ್ ಮಾಡಿ ಹೊಳೆಯುವ ಮೈಕಾಂತಿ ನಿಮ್ಮದಾಗಿಸಿಕೊಳ್ಳಿ.
ಓಟ್ ಮೀಲ್ ಗೆ ಜೇನುತುಪ್ಪ ಮತ್ತು ಕ್ಯಾಮೊಮೈಲ್ ಟೀ ಪೌಡರ್ ನ್ನು ಮಿಕ್ಸ್ ಮಾಡಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಇದನ್ನು ವಾರದಲ್ಲಿ 3 ಬಾರಿ ಮಾಡಿ.
ಓಟ್ ಮೀಲ್ ಆ್ಯಂಟಿ ಆಕ್ಸಿಡೆಂಟ್ ಅನ್ನು ಹೊಂದಿರುವುದರಿಂದ ಇದು ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಚರ್ಮದಲ್ಲಿರುವ ಸತ್ತಕೋಶಗಳನ್ನು ತೆಗೆದು ಹಾಕುವುದರ ಜೊತೆಗೆ ಮೊಡವೆ ಮತ್ತು ಹೆಚ್ಚುವರಿ ತೈಲದ ಸಮಸ್ಯೆಯನ್ನು ನಿವಾರಿಸುತ್ತದೆ.