ಆ್ಯಪಲ್ ಸೈಡರ್ ವಿನೇಗರ್ ನ್ನು ತೂಕ ಇಳಿಕೆಗೂ ಬಳಸಲಾಗುತ್ತದೆ ಜತೆಗೆ ತ್ವಚೆಯ ಆರೈಕೆಗೂ ಬಳಸುತ್ತಾರೆ. ಈ ಆ್ಯಪಲ್ ಸೈಡರ್ ವಿನೇಗರ್ ಅನ್ನು ತ್ವಚೆಗೆ ಹೇಗೆಲ್ಲಾ ಬಳಸಬಹುದು ಎಂಬುದನ್ನು ನೋಡೋಣ.
ನಿಮ್ಮ ಮುಖದಲ್ಲಿ ಮೊಡವೆ, ಕಲೆಗಳು ಇದ್ದರೆ ಒಂದು ಬೌಲ್ ಗೆ 1 ಚಮಚ ಆ್ಯಪಲ್ ಸೈಡರ್ ವಿನೇಗರ್ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಹತ್ತಿ ಉಂಡೆಯ ಸಹಾಯದಿಂದ ಈ ಮಿಶ್ರಣವನ್ನು ನಿಮ್ಮ ಮುಖದಲ್ಲಿ ಎಲ್ಲಿ ಮೊಡವೆ ಇದೆಯೋ ಅಲ್ಲಿ ಹಾಕಿ 10 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೆ 3 ಬಾರಿ ಇದನ್ನು ಅನುಸರಿಸಿ.
ಇನ್ನು ತ್ವಚೆಯ ಮೇಲಿರುವ ಡೆಡ್ ಸ್ಕಿನ್ ಅನ್ನು ತೆಗೆಯಲು ಕೂಡ ಈ ಆ್ಯಪಲ್ ಸೈಡರ್ ವಿನೇಗರ್ ಅನ್ನು ಬಳಸಬಹುದು. ನೀರಿಗೆ ಸ್ವಲ್ಪ ಆ್ಯಪಲ್ ಸೈಡರ್ ವಿನೇಗರ್ ಹಾಕಿ ಚೆನ್ನಾಗಿ ಕದಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ನಿಧಾನಕ್ಕೆ ತಿಕ್ಕಿದರೆ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
ಹಾಗೇ ಇದನ್ನು ಟೋನರ್ ರೀತಿ ಬಳಸಬಹುದು. ಸ್ವಲ್ಪ ನೀರಿಗೆ ಇದನ್ನು ಹಾಕಿ ಅದಕ್ಕೆ ಯಾವುದಾದರೂ ಎಸೆನ್ಸಿಯಲ್ ಆಯಿಲ್ 2 ಹನಿ ಹಾಕಿ ಮುಖಕ್ಕೆ ಟೋನರ್ ರೀತಿ ಬಳಸಿದರೆ ಮುಖದಲ್ಲಿನ ರಂಧ್ರಗಳನ್ನು ಕಡಿಮೆ ಮಾಡುತ್ತದೆ.