ನೈಸರ್ಗಿಕವಾಗಿ ಕೂದಲಿಗೆ ಕಲರ್ ಮಾಡುವುದು ಹೇಗೆ ಗೊತ್ತಾ….?

ಕೂದಲು ಕಲರಿಂಗ್ ಮಾಡಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾನಿಗೊಳಗಾಗುತ್ತದೆ. ಹಾಗಾಗಿ ಕೂದಲು ಕಲರಿಂಗ್ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ. ಹಾಗಾಗಿ ಮಾರಿಗೋಲ್ಡ್ ಹೂವಿನಿಂದ ನಿಮ್ಮ ಕೂದಲಿಗೆ ಕಲರಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ 1 ಕಪ್ ಮಾರಿಗೋಲ್ಡ್ ದಳಗಳನ್ನು ಹಾಗೂ 2 ಚಮಚ ಬೆಲ್ಲವನ್ನು ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಕುದಿಸಿ. ಬಳಿಕ ತಣ್ಣಗಾಗಿಸಿ ಸೋಸಿ ನೀರನ್ನು ಫ್ರಿಜ್ ನಲ್ಲಿಡಿ. ಕೂದಲನ್ನು ಮೊದಲು ಶಾಂಪೂವಿನಿಂದ ವಾಶ್ ಮಾಡಿ. ಆಮೇಲೆ ಈ ನೀರನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ.

ಇದು ಒಣಗಿದ ಬಳಿಕ ನಿಮ್ಮ ಕೂದಲು ತಾಮ್ರದ ಬಣ್ಣದಲ್ಲಿ ಹೊಳೆಯುತ್ತಿರುತ್ತದೆ. ನೀವು ಕೂದಲನ್ನು ವಾಶ್ ಮಾಡಿದ ಪ್ರತಿ ಬಾರಿ ಕಲರ್ ಬರಲು ಹೀಗೆ ಮಾಡಬಹುದು, ಇದರಿಂದ ಕೂದಲಿಗೆ ಯಾವುದೆ ಹಾನಿಯಾಗುವುದಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read