
ಕಣ್ಣಿನ ಕೆಳಗೆ ಮೂಡುವ ಡಾರ್ಕ್ ಸರ್ಕಲ್ ನಿಮ್ಮ ಇಡೀ ಮುಖದ ಸೌಂದರ್ಯವನ್ನು ಹಾಳುಗೆಡಹುತ್ತದೆ. ಇದನ್ನು ನಿವಾರಿಸಲು ನೀವು ಕೆಲ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು.
ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತಲಿನ ಭಾಗಕ್ಕೆ ನಿಧಾನವಾಗಿ ಹಚ್ಚಿ ಮಲಗಿ, ಮರುದಿನ ಬೆಳಗ್ಗೆ ಎದ್ದಾಕ್ಷಣ ತಣ್ಣಗಿನ ನೀರಿನಿಂದ ತೊಳೆಯಿರಿ. ಇದರಿಂದ ಕಪ್ಪು ವರ್ತುಲ ಸಮಸ್ಯೆ ನಿಧಾನವಾಗಿ ದೂರವಾಗುತ್ತದೆ.
ಜೇನುತುಪ್ಪವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಹದಿನೈದು ನಿಮಿಷ ಬಳಿಕ ತೊಳೆದುಕೊಂಡರೂ ಈ ಡಾರ್ಕ್ ಸರ್ಕಲ್ ಸಮಸ್ಯೆ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ನಿತ್ಯ ಹಚ್ಚುವುದರಿಂದ ಈ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಅರಿಶಿನ ಪುಡಿಗೆ ಅಥವಾ ತೇದ ಅರಶಿನಕ್ಕೆ ನಿಂಬೆರಸ ಅಥವಾ ಮೊಸರು ಸೇರಿಸಿ ಹಚ್ಚಿಕೊಂಡರೆ, ಕಡಲೆ ಹಿಟ್ಟಿಗೆ ತುಸು ಅರಶಿನ ಪುಡಿ ಬೆರೆಸಿ ಕಣ್ಣ ಕೆಳಗೆ ಹಚ್ಚಿಕೊಂಡರೆ, ವ್ಯಾಸಲಿನ್ ಗೆ ನಿಂಬೆರಸ ಸೇರಿಸಿ ಹಚ್ಚಿದರೆ ಕಪ್ಪು ವರ್ತುಲ ಸಮಸ್ಯೆ ದೂರವಾಗುತ್ತದೆ.