HomeAstroವಿನಾಯಕನನ್ನು ಹೀಗೆ ಪೂಜಿಸಿದ್ರೆ ಶೀಘ್ರವೇ ಪರಿಹಾರವಾಗುತ್ತೆ ನಿಮ್ಮ ಕಷ್ಟ

ವಿನಾಯಕನನ್ನು ಹೀಗೆ ಪೂಜಿಸಿದ್ರೆ ಶೀಘ್ರವೇ ಪರಿಹಾರವಾಗುತ್ತೆ ನಿಮ್ಮ ಕಷ್ಟ

ಗಣೇಶನನ್ನು ವಿಘ್ನ ವಿನಾಶಕ ಎಂದು ಕರೆಯುತ್ತಾರೆ. ಜೀವನದಲ್ಲಿ ಕಷ್ಟಗಳು ಎದುರಾದರೆ ಅದನ್ನು ನಿವಾರಿಸಲು ನಾವು ಗಣೇಶನನ್ನು ಪೂಜಿಸುತ್ತೇವೆ. ಹಾಗಾಗಿ ನಿಮ್ಮ ಜೀವನದಲ್ಲಿ ಎದುರಾದ ಕಷ್ಟಗಳು ತೊಲಗಿ ಹೋಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜಿಸಿ.

ಬೆಳಿಗ್ಗೆ ಸ್ನಾನಾಧಿಗಳು ಮುಗಿದ ಬಳಿಕ ಒಂದು ವೀಳ್ಯದೆಲೆಯ ಮೇಲೆ ಅರಶಿನ ಕುಂಕುಮ, ಹೂಗಳನ್ನಿಟ್ಟು ಗಣೇಶನ ಮೂರ್ತಿಯನ್ನು ಇಟ್ಟು ಕೆಂಪು ಮತ್ತು ಬಿಳಿ ಬಣ್ಣದ ಹೂಗಳಿಂದ ಶೃಂಗರಿಸಿ. ಹಾಗೇ ದೀಪಾರಾಧನೆ ಮಾಡುವಾಗ ದೀಪಗಳಿಗೆ 5 ಬತ್ತಿಗಳನ್ನು ಇಟ್ಟು ಕೊಬ್ಬರಿಎಣ್ಣೆ ಹಾಕಿ ದೀಪಾರಾಧನೆ ಮಾಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಣೇಶನಿಗೆ ಕಲ್ಲುಸಕ್ಕರೆ ಅಥವಾ ರವೆ ಲಡ್ಡುವನ್ನು ಅರ್ಪಿಸಬೇಕು. ಅದರ ಜೊತೆಗೆ “ ಗಂ ಕ್ಷಿಪ್ರಪ್ರಸಾದನಾಯ ನಮಃ’ ಎಂಬ ಮಂತ್ರವನ್ನು 21ಬಾರಿ ಹೇಳುತ್ತಾ ಗರಿಕೆಯನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಕಷ್ಟಗಳು ಶೀಘ್ರವಾಗಿ ತೊಲಗಿ ಹೋಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular