ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ವಿಷಯ ಎಲ್ಲರಿಗೂ ತಿಳಿದಿದೆ.
ಆದರೆ ಈ ಕೊಬ್ಬರಿ ಎಣ್ಣೆ ಯಾವ ರೀತಿಯಲ್ಲಿ ಕೂದಲಿನ ಆರೋಗ್ಯವನ್ನ ಕಾಪಾಡುತ್ತೆ..?ಅನ್ನೋ ಪ್ರಶ್ನೆಗೆ ಎಲ್ಲರಿಗೂ ಉತ್ತರ ಗೊತ್ತಿರೋಕೆ ಸಾಧ್ಯವಿಲ್ಲ. ಕೊಬ್ಬರಿ ಎಣ್ಣೆಯಿಂದ ತಲೆಯ ಕೂದಲುಗಳನ್ನ ಮಸಾಜ್ ಮಾಡಿಕೊಳ್ಳೋದ್ರಿಂದ ಆಗುವ ಲಾಭದ ಬಗ್ಗೆ ಚರ್ಮ ತಜ್ಞೆ ಅಪರ್ಣಾ ಶಾಂತರಾಮ್ ಮುಖ್ಯ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಕೂದಲನ್ನ ರಕ್ಷಣೆ ಮಾಡೋದ್ರಲ್ಲಿ ಕೊಬ್ಬರಿ ಎಣ್ಣೆ ಅತ್ಯಂತ ಪ್ರಮುಖ ಪಾತ್ರವನ್ನ ವಹಿಸುತ್ತೆ. ಬೇಸಿಗೆಯ ಸಂದರ್ಭದಲ್ಲಿ ಕೂದಲು ಅನೇಕ ಸಮಸ್ಯೆಗಳನ್ನ ಎದಿರಿಸುತ್ತದೆ. ಕೂದಲಿಗೆ ಸರಿಯಾದ ತೇವಾಂಶ ಸಿಗಲಿಲ್ಲವೆಂದರೆ ಉದುರೋಕೆ ಆರಂಭವಾಗಬಹುದು. ಆದರೆ ಕೊಬ್ಬರಿ ಎಣ್ಣೆ ಈ ಸಮಸ್ಯೆಗೆ ಪರಿಹಾರ ನೀಡುತ್ತೆ. ಕೊಬ್ಬರಿ ಎಣ್ಣೆಯಿಂದ ತಲೆಯ ಬುಡದಲ್ಲಿ ಮಸಾಜ್ ಮಾಡೋದ್ರಿಂ ಸೂರ್ಯನಿಂದ ಆಗಬಹುದಾದ ಎಲ್ಲಾ ತೊಂದರೆಗಳಿಂದ ಮುಕ್ತಿ ನೀಡಲಿದೆ.
ಕೂದಲಿನ ಆರೈಕೆಗೆ ಅಂತಾ ಮಾರುಕಟ್ಟೆಯಲ್ಲಿ ನಿಮಗೆ ತುಂಬಾ ಪ್ರಾಡಕ್ಟ್ಗಳು ಸಿಗಬಹುದು. ಆದರೆ ಈ ರಾಸಾಯನಿಕಗಳನ್ನ ದೀರ್ಘಾವದಿ ಬಳಕೆ ಮಾಡೋದ್ರಿಂದ ನಿಮ್ಮ ಕೂದಲಿನ ಆರೋಗ್ಯ ಹಾಳಾಗಬಹುದು. ಆದರೆ ಕೊಬ್ಬರಿ ಎಣ್ಣೆ ಮಾತ್ರ ಎಂದಿಗೂ ನಿಮ್ಮ ಕೂದಲಿನ ಆರೋಗ್ಯಕ್ಕೆ ಧಕ್ಕೆ ತರದು.
ಹೀಗಾಗಿ ಸಾವಿರಾರು ರೂಪಾಯಿಗಳನ್ನ ರಾಸಾಯನಿಕಗಳ ಮೇಲೆ ವ್ಯಯಿಸೋದಕ್ಕಿಂತ ಕೊಬ್ಬರಿ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್ ಹಾಗೂ ಜೀವಸತ್ವಗಳೇ ಸಾಕಾಗುತ್ತೆ.
ಅತಿಯಾದ ಬಿಸಿಲು ಹಾಗೂ ತಾಪಮಾನದಿಂದಾಗಿ ಕೂದಲಿನ ಬುಡದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತೆ. ಆದರೆ ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿಬ್ಯಾಕ್ಟೀರಿಯಾ ಅಂಶ ಕೂದಲಿನ ಜೊತೆಯಲ್ಲಿ ನೆತ್ತಿಯ ಆರೋಗ್ಯವನ್ನೂ ಕಾಪಾಡಲಿದೆ.