alex Certify ನಿಮ್ಮ ʼಸೌಂದರ್ಯʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಸೌಂದರ್ಯʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

 

11 Skincare Tips To Enhance Your Natural Beauty - L'Oréal Parisಸೌಂದರ್ಯ ವೃದ್ಧಿ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಕೆಲವಷ್ಟು ಟಿಪ್ಸ್ ಗಳಿವೆ. ಅವುಗಳು ಯಾವುವು ಎಂದಿರಾ?

ಒಂದು ಚಮಚ ಕೊತ್ತಂಬರಿ ಕಾಳನ್ನು ಹಿಂದಿನ ರಾತ್ರಿ ನೆನೆಸಿ, ಮರುದಿನ ಬೆಳಗ್ಗೆ ಆ ನೀರಿನಿಂದ ಮುಖ ತೊಳೆಯಿರಿ. ಒರೆಸಿಕೊಳ್ಳದಿರಿ. ಹಾಗೇ ಒಣಗಲು ಬಿಡಿ. ಅರ್ಧ ಗಂಟೆ ಬಳಿಕ ಮುಖ ತೊಳೆದರೆ ತ್ವಚೆ ವಿಶೇಷ ಹೊಳಪು ಪಡೆದುಕೊಂಡಿರುತ್ತದೆ.

ಅರಶಿನ ಕೊಂಬನ್ನು ತೇಯ್ದು ಹಾಲು ಬೆರೆಸಿ ಮುಖಕ್ಕೆ ಹಚ್ಚುತ್ತಾ ಬಂದರೆ ನಿಮ್ಮ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸಿಕೊಳ್ಳುವುದೇ ಇಲ್ಲ.

ಮೊಡವೆ ಮೂಡಿದ ಜಾಗಕ್ಕೆ ಕಾಳು ಮೆಣಸಿನ ಪುಡಿಗೆ ಮೊಸರು ಮಿಕ್ಸ್ ಮಾಡಿ ಹಚ್ಚಿ ನೋಡಿ. ಇದು ಎಷ್ಟು ಖಾರವೋ ಅಷ್ಟೇ ತಂಪು, ಬಹುಬೇಗ ಮೊಡವೆಯನ್ನೂ, ಅದರ ಕಲೆಯನ್ನೂ ನಿವಾರಿಸುತ್ತದೆ. ಶುಂಠಿಯ ಪೇಸ್ಟ್ ನಿಂದಲೂ ಇದೇ ಪ್ರಯೋಜನವನ್ನು ಪಡೆಯಬಹುದು.

 ಅಡುಗೆ ಮನೆಯಲ್ಲಿ ಬಳಸುವ ಮೇಯನೇಸ್ ಸಾಸ್ ಅನ್ನು ಸುಲಭದಲ್ಲಿ ತಯಾರಿಸಬಹುದು. ಮೊಟ್ಟೆ, ಎಣ್ಣೆ, ನಿಂಬೆರಸವನ್ನು ಬೌಲ್ ಗೆ ಹಾಕಿ ನಿಧಾನಕ್ಕೆ ತಿರುವಿದರೆ ಮೇಯನೇಸ್ ರೆಡಿ. ಇದನ್ನು ಕೂದಲಿಗೆ ಮಾಸ್ಕ್ ನಂತೆ ಬಳಸಿ. ಒಂದು ಗಂಟೆ ಬಳಿಕ ಸ್ನಾನ ಮಾಡಿದರೆ ಕಂಡಿಷನರ್ ಪರಿಣಾಮ ನಿಮಗೆ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...