ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಜ್ವರಕ್ಕೆ ಆಂಟಿಬಯೋಟಿಕ್ ನೀಡುತ್ತಾರೆ. ಇದರಿಂದ ಮಗುವಿಗೆ ದೀರ್ಘಕಾಲದ ಸಮಸ್ಯೆ ಕಾಡುವ ಸಂಭವವಿರುತ್ತದೆ. ಹಾಗಾಗಿ ಈ ಆಂಟಿಬಯೋಟಿಕ್ ನ್ನು ಬಳಸುವ ಬದಲು ಈ ಮನೆಮದ್ದನ್ನು ಬಳಸಿ.
*ಸಾಸಿವೆ ಎಣ್ಣೆ ಬಿಸಿ ಮಾಡಿ ಅದಕ್ಕೆ 2-3 ಬೆಳ್ಳುಳ್ಳಿ, ಲವಂಗ, ಓಂಕಾಳನ್ನು ಸೇರಿಸಿ ಇದನ್ನು ಮಗುವಿನ ಕಾಲು ಬೆನ್ನು ಮತ್ತು ಎದೆಗೆ ಉಜ್ಜಿ.
*ಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ಮಗುವಿಗೆ ಕುಡಿಯಲು ನೀಡಿ.
*ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಸಿ. ಇದರಿಂದ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಮೂತ್ರದ ಮೂಲಕ ಹೊರಹೋಗುತ್ತವೆ.
* ನೀರಿಗೆ ಉಪ್ಪು ಮಿಕ್ಸ್ ಮಾಡಿ ಬಾಯನ್ನು ಮುಕ್ಕಳಿಸಿ. ಇದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತದೆ.
*ಜ್ವರ ಅತೀಯಾಗಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.