HomeAstroಹಣಕಾಸಿನ ತೊಂದರೆ ದೂರವಾಗ್ಬೇಕೆಂದ್ರೆ ಈ ದೀಪ ಹಚ್ಚಿ

ಹಣಕಾಸಿನ ತೊಂದರೆ ದೂರವಾಗ್ಬೇಕೆಂದ್ರೆ ಈ ದೀಪ ಹಚ್ಚಿ

ನಿಮ್ಮ ಮೇಲೆ ಲಕ್ಷ್ಮಿ- ಕುಬೇರರ ಕೃಪೆ ಇದ್ದರೆ ಯಾವುದೆ ಹಣಕಾಸಿನ ಸಮಸ್ಯೆ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಜೀವನದಲ್ಲಿ ನೀವು ಯಾವಾಗಲೂ ಮೇಲುಗೈ ಸಾಧಿಸುತ್ತಿರಿ. ಹಾಗಾಗಿ ಲಕ್ಷ್ಮಿ – ಕುಬೇರ ಅನುಗ್ರಹ ನಿಮ್ಮ ಮೇಲಾಗಬೇಕೆಂದರೆ ಮನೆಯಲ್ಲಿ ಜಲದೀಪವನ್ನು ಹಚ್ಚಿ.

ಮಂಗಳವಾರ ಅಥವಾ ಶುಕ್ರವಾರದಂದು ಒಂದು ತಟ್ಟೆಯನ್ನು ತೆಗೆದುಕೊಂಡು, ಅದರ ಮೇಲೆ ಅರಶಿನ ಕುಂಕುಮವನ್ನು ಹಚ್ಚಿ ಅದನ್ನು ಅಕ್ಕಿ ಹಿಟ್ಟಿನಿಂದ ಬರೆದ ರಂಗೋಲಿಯ ಕೆಳಗೆ ಇಡಬೇಕು. ಬಳಿಕ ಈ ತಟ್ಟೆಯ ಮೇಲೆ ಅರಶಿನ ಕುಂಕುಮ ಹಚ್ಚಿದ ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಅರಶಿನ ಕುಂಕುಮ ಹಚ್ಚಿದ ಗಾಜಿನ ತಟ್ಟೆಯನ್ನು ಇಡಬೇಕು. ಅದಕ್ಕೆ ನೀರನ್ನು ಮತ್ತು ಎಣ್ಣೆಯನ್ನು ಹಾಕಬೇಕು. ಬಳಿಕ ಅದರ ಮೇಲೆ ಮತ್ತೊಂದು ಅರಶಿನ ಕುಂಕುಮ ಹಚ್ಚಿದ ವೀಳ್ಯದೆಲೆಯನ್ನು ಇಟ್ಟು ಅದಕ್ಕೆ ತುಪ್ಪದಲ್ಲಿ ಅದ್ದಿದ ಬತ್ತಿಯನ್ನು ಇಟ್ಟು ದೀಪವನ್ನು ಬೆಳಗಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ದೀಪದ ಜ್ವಾಲೆಯನ್ನು ಪೂರ್ವದಿಕ್ಕಿಗಿಟ್ಟರೆ ಮನೆಯಲ್ಲಿರುವವರ ಆರೋಗ್ಯ ವೃದ್ಧಿಯಾಗುತ್ತದೆ. ಮನಶಾಂತಿ ದೊರೆಯುತ್ತದೆ, ನಕರಾತ್ಮಕ ಶಕ್ತಿ ದೂರವಾಗುತ್ತದೆ. ಪಶ್ವಿಮ ದಿಕ್ಕಿಗೆ ಮುಖ ಮಾಡಿ ಇಟ್ಟರೆ ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆಗಳು ದೂರವಾಗುತ್ತದೆ. ಉತ್ತರ ದಿಕ್ಕಿಗೆ ಮುಖ ಮಾಡಿ ಇಟ್ಟರೆ ಅಂದುಕೊಂಡ ಕೆಲಸ ಕಾರ್ಯ ನೇರವೇರುತ್ತದೆ. ಆದರೆ ದಕ್ಷಿಣ ದಿಕ್ಕಿಗೆ ದೀಪಾರಾಧನೆ ಮಾಡಬೇಡಿ.

For Latest News Updates, Join Our Whatsapp Community🚩
RELATED ARTICLES

Most Popular