ಥಾಲಿಪಟ್ಟು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಹಿಟ್ಟುಗಳನ್ನು ಬಳಸಿ ಮಾಡುವ ಈ ತಿಂಡಿ ಬಲು ರುಚಿಯಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಒಂದು ಅಗಲವಾದ ಬೌಲ್ ಗೆ 1 ಕಪ್ ಗೋಧಿಹಿಟ್ಟು, ½ ಕಪ್ ಜೋಳದ ಹಿಟ್ಟು, ½ ಕಪ್ ಅಕ್ಕಿ ಹಿಟ್ಟು, ½ ಕಪ್ ಕಡಲೆಹಿಟ್ಟು ಹಾಕಿ ನಂತರ ಇದಕ್ಕೆ ¼ ಕಪ್ ನಷ್ಟು ಸಣ್ಣಗೆ ಹಚ್ಚಿದ ಈರುಳ್ಳಿ, 4 ಹಸಿಮೆಣಸು, 1/2 ಕಪ್ ಕೊತ್ತಂಬರಿಸೊಪ್ಪು ಹಾಕಿ ನಂತರ 2 ಟೀ ಸ್ಪೂನ್ ಧನಿಯಾ ಪುಡಿ, 1 ಟೀ ಸ್ಪೂನ್ ಗರಂ ಮಸಾಲೆ, 1 ಟೀ ಸ್ಪೂನ್ ಜೀರಿಗೆ, ½ ಟೀ ಸ್ಪೂನ್ ಖಾರದ ಪುಡಿ, 2 ಟೇಬಲ್ ಸ್ಪೂನ್ ಎಳ್ಳು, ¼ ಟೀ ಸ್ಪೂನ್ ಅರಿಶಿನ, ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಾದಿಕೊಂಡು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.
ನಂತರ ಒಂದು ಬಟರ್ ಪೇಪರ್ ತೆಗೆದುಕೊಂಡು ಅದರ ಮೇಲೆ ಎಣ್ಣೆ ಸವರಿ ಮಾಡಿಟ್ಟುಕೊಂಡ ಹಿಟ್ಟಿನಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ಕೈಯಿಂದ ನಿಧಾನಕ್ಕೆ ತಟ್ಟಿ ಚಪಾತಿ ರೀತಿ ಮಾಡಿ. ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾಗುತ್ತಲೇ ಅದಕ್ಕೆ ಮಾಡಿಟ್ಟುಕೊಂಡ ಥಾಲಿಪಟ್ಟು ಹಾಕಿ ಎರಡು ಕಡೆ ಚೆನ್ನಾಗಿ ಕಾಯಿಸಿಕೊಳ್ಳಿ. ಮೊಸರು ಹಾಗೂ ತುಪ್ಪದ ಜತೆ ತಿನ್ನಲು ಚೆನ್ನಾಗಿರುತ್ತದೆ.