ನೀವು ದುಬಾರಿ ಮೊತ್ತದ ನೇಲ್ ಪಾಲಿಶ್ ಕೊಂಡಿರಬಹುದು, ಬಣ್ಣವೂ ಆಕರ್ಷಣೀಯವಾಗಿರಬಹುದು. ಆದರೆ ಅದನ್ನು ನೀವು ಹೇಗೆ ಅಪ್ಲೈ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಸೌಂದರ್ಯ ಅಡಗಿದೆ.
ನೇಲ್ ಪಾಲಿಶ್ ಹಚ್ಚುವ ಮುನ್ನ ಉಗುರನ್ನು ಆಕರ್ಷಕವಾಗಿ ಕತ್ತರಿಸಿ. ನೇಲ್ ಕಟ್ಟರಿನ ದೊರಗಿನ ಭಾಗದಲ್ಲಿ ತಿಕ್ಕಿ. ಶಾರ್ಪ್ ಮಾಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಬೆರಳುಗಳನ್ನು ಅದ್ದಿ ಬಳಿಕ ಸ್ವಚ್ಛಗೊಳಿಸಿ.
ನೇಲ್ ಪಾಲಿಶ್ ಗೆ ಕೆಮಿಕಲ್ ಮಿಕ್ಸ್ ಮಾಡಿರುತ್ತಾರೆ ಎಂಬುದಂತೂ ಸತ್ಯ ಸಂಗತಿ. ಹಾಗಾಗಿ ಇದನ್ನು ನೇರವಾಗಿ ಹಚ್ಚಿಕೊಳ್ಳುವ ಮುನ್ನ ಬೇಸ್ ಕೋಟ್ ಬಳಸಿ. ಹಚ್ಚುವಾಗಲೂ ಅಷ್ಟೇ ಚರ್ಮಕ್ಕೆ ತಾಕದಂತೆ ಉಗುರಿನ ಬುಡದ ತನಕ ಆಕರ್ಷಕವಾಗಿ ಹಚ್ಚಿ. ಅವಸರದಲ್ಲಿ ಹಚ್ಚಿದರೆ ಸರಿಯಾಗದು, ಸಮಯಾವಕಾಶ ಇಟ್ಟುಕೊಂಡು ತಾಳ್ಮೆಯಿಂದ ಹಚ್ಚಿ.
ನೇಲ್ ಪಾಲಿಶ್ ಕೊನೆಗೆ ಹಚ್ಚೋಣ ಎಂದು ಬಾಕಿಯಿಟ್ಟರೆ ಗಡಿಬಿಡಿಯಲ್ಲಿ ಹಚ್ಚಿ ಅದು ಒಣಗದೆ ನಿಮ್ಮ ಉಡುಪಿಗೋ ತ್ವಚೆಗೋ ತಾಗಿ ಅಸಹ್ಯವಾಗಿ ಕಾಣಿಸಬಹುದು. ಅದನ್ನು ತಪ್ಪಿಸಲು ನಿಧಾನವಾಗಿಯೇ ಹಚ್ಚಿ. ಉಗುರಿನ ಸುತ್ತ ವ್ಯಾಸಲಿನ್ ಅಥವಾ ಇತರ ಬಾಡಿಲೋಷನ್ ಹಚ್ಚುವುದರಿಂದ ತ್ವಚೆಗೆ ಅಂಟಿದ ನೇಲ್ ಪಾಲಿಶ್ ಅನ್ನು ಸುಲಭವಾಗಿ ತೆಗೆಯಬಹುದು.