ಚಳಿಗಾಲದಲ್ಲಿ ತ್ವಚೆ ಆರೈಕೆಗೆ ದುಬಾರಿ ಕ್ರೀಮ್ ಗಳೇ ಆಗಬೇಕಿಲ್ಲ. ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಕೆಲವು ವಸ್ತುಗಳೂ ಸಾಕು. ಅದರಲ್ಲಿ ಬೆಣ್ಣೆಯೂ ಒಂದು.
ಇದೊಂದು ತ್ವಚೆಯ ರಕ್ಷಣೆಯ ಕ್ರೀಮ್ ನಂತೆ ಕಾರ್ಯ ನಿರ್ವಹಿಸುತ್ತದೆ. ಚಳಿಗಾಲದಲ್ಲಿ ತುಟಿ ವಿಪರೀತ ಒಡೆಯುತ್ತಿದ್ದರೆ, ಒಣಗುತ್ತಿದ್ದರೆ ಹಾಗೂ ಸಿಪ್ಪೆ ಬಿಡುತ್ತಿದ್ದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಬೆಣ್ಣೆ ಹಚ್ಚಿ. ತೆಳುವಾಗಿ ಹಚ್ಚಿದರೆ ಅಂದರೆ ಪಸೆ ಕಾಣಿಸಿಕೊಳ್ಳುವಂತೆ ಹಚ್ಚಿದರೆ ಸಾಕು.
ಇನ್ನು ಚಳಿಗಾಲದಲ್ಲಿ ವಿಪರೀತ ಹಿಮ್ಮಡಿ ಒಡೆಯುವ ಸಮಸ್ಯೆ ಇರುವವರು ಬೆಣ್ಣೆಯನ್ನು ಮಲಗುವ ಮುನ್ನ ಸರಿಯಾಗಿ ಹಚ್ಚಿ ಪ್ಲಾಸ್ಟಿಕ್ ಕವರ್ ಕಟ್ಟಿ ಮಲಗಿ. ಬೆಳಗ್ಗೆದ್ದು ನೋಡಿದರೆ ಸೀಳಿದ ಕಾಲಿನ ಸಮಸ್ಯೆ ಹಾಗೂ ಅದರ ನೋವು ಕಡಿಮೆಯಾಗಿರುತ್ತದೆ.
ನಿಮ್ಮ ತ್ವಚೆ ಒಣಗಿದ್ದರೆ, ಬಿರುಕು ಬಿಟ್ಟಿದ್ದರೆ ಅರ್ಧ ಚಮಚ ಬೆಣ್ಣೆಯನ್ನು ಅಂಗೈಯಲ್ಲಿ ಹಾಕಿ ಚೆನ್ನಾಗಿ ತಿಕ್ಕಿ. ಅದು ಕರಗಿ ನೀರಾಗುತ್ತಲೇ ಬಿರುಕು ಬಿಟ್ಟಲ್ಲಿಗೆ ತಿಕ್ಕಿ ನಯವಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ಸಮಸ್ಯೆ ಬಹುತೇಕ ದೂರವಾಗುತ್ತದೆ.