ಆದಿಯಲ್ಲಿ ಮೊದಲು ಪೂಜಿಸುವ ದೇವರು ಗಣೇಶ. ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ಮಹತ್ವದ ಸ್ಥಾನವಿದೆ. ಸುಖ, ಶಾಂತಿಗಾಗಿ ಗಣೇಶನ ಆರಾಧನೆ ಮಾಡಲಾಗುತ್ತದೆ. ಗಣೇಶನ ಪೂಜೆ ಮಾಡುವ ವೇಳೆ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಗಣೇಶನ ಆರಾಧನೆ ಮಾಡುವವರು ಹಿಂಸೆಯಿಂದ ದೂರವಿರಬೇಕು. ಮನಸ್ಸಿನಲ್ಲಿ ಕೆಟ್ಟ ಭಾವನೆ ಬರದಂತೆ ನೋಡಿಕೊಳ್ಳಬೇಕು. ಕೋಪ ಮಾಡಿಕೊಳ್ಳಬಾರದು. ತಾಳ್ಮೆಯಿಂದಿರಬೇಕು. ಗಣೇಶನ ಪೂಜೆ ಮಾಡುವವರು ಸುಳ್ಳು ಹೇಳಬಾರದು. ಮಾಂಸ, ಮದ್ಯದ ಸೇವನೆ ಮಾಡಬಾರದು. ಯಾವುದೇ ಆಹಾರ ಸೇವನೆ ಮಾಡುವ ಮೊದಲು ಗಣೇಶನಿಗೆ ನೀಡಬೇಕು.
ಕೆಟ್ಟ ಅಭ್ಯಾಸದಿಂದ ದೂರವಿರಬೇಕು. ಕಳ್ಳತನ ಮಾಡಬಾರದು. ಮನೆಯನ್ನು ಕೊಳಕಾಗಲು ಬಿಡಬೇಡಿ. ದೇವರ ಮನೆಯಲ್ಲಿ ಕೊಳಕಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ಮೇಲೆ ಕೈ ಎತ್ತಬೇಡಿ. ಮಹಿಳೆಯರನ್ನು ಅವಮಾನಿಸಬೇಡಿ. ಯಾರನ್ನೂ ಹಾಸ್ಯ ಮಾಡಬೇಡಿ.