HomeRecipiesಇಲ್ಲಿದೆ ರುಚಿಕರ ‘ಸಿಹಿ ಅವಲಕ್ಕಿ’ ಮಾಡುವ ವಿಧಾನ

ಇಲ್ಲಿದೆ ರುಚಿಕರ ‘ಸಿಹಿ ಅವಲಕ್ಕಿ’ ಮಾಡುವ ವಿಧಾನ

ಉಪ್ಪಿಟ್ಟು ಮಾಡಿದಾಗ ಅದರ ಜತೆಗೆ ಸಿಹಿ ಅವಲಕ್ಕಿ ಇದ್ದರೆ ಸಖತ್ ಆಗಿರುತ್ತದೆ. ಹಾಗೇ ಅವಲಕ್ಕಿ ಕೂಡ ಸುಲಭವಾಗಿ ಮಾಡಬಹುದಾದ ಒಂದು ತಿಂಡಿ. ಸಂಜೆಯ ಸ್ನ್ಯಾಕ್ಸ್ ಗೂ ಇದು ಚೆನ್ನಾಗಿರುತ್ತದೆ. ಇಲ್ಲಿ ಮಾಡುವ ವಿಧಾನ ಇದೆ ನೋಡಿ.

ಮೊದಲಿಗೆ 2 ಕಪ್ ತೆಳು ಅವಲಕ್ಕಿ ತೆಗೆದುಕೊಂಡು ಅದರಲ್ಲಿ ಕಸ ಇರದಂತೆ ನೋಡಿಕೊಳ್ಳಿ. ನಂತರ ½ ಕಪ್ ಬೆಲ್ಲಕ್ಕೆ ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ ಬೆಲ್ಲ ಕರಗಿಸಿಕೊಂಡು ಅದನ್ನು ಸೋಸಿಕೊಳ್ಳಿ. ಬೆಲ್ಲದ ಪಾಕವನ್ನು ಸಣ್ಣ ಉರಿಯಲ್ಲಿ ಗ್ಯಾಸ್ ಮೇಲೆ ಇಟ್ಟು ಅದಕ್ಕೆ ¼ ಕಪ್ ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ¼ ಟೀ ಸ್ಪೂನ್ ಏಲಕ್ಕಿ ಪುಡಿ ಉದುರಿಸಿದರೆ ರುಚಿಕರವಾದ ಅವಲಕ್ಕಿ ತಿನ್ನಲು ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular