ʼಆಪಲ್ ಸೈಡರ್ ವಿನೆಗರ್ʼ ಬಳಸುವ ಮುನ್ನ ವಹಿಸಿ ಈ ಎಚ್ಚರ

ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಚರ್ಮದ ಸಮಸ್ಯೆ, ಆರೋಗ್ಯದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಇದನ್ನು ಬಳಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ.

*ಆಪಲ್ ಸೈಡರ್ ವಿನೆಗರ್ ನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಹಲವು ಲಾಭಗಳನ್ನು ಪಡೆಯಬಹುದು. ಊಟವಾದ ಬಳಿಕ ಸೇವಿಸಬೇಡಿ.

*ಹಲ್ಲುಗಳನ್ನು ಉಜ್ಜಿದ ತಕ್ಷಣ ಇದನ್ನು ಸೇವಿಸಬಾರದು. ಇದರಿಂದ ಹಲ್ಲಿನ ಸಮಸ್ಯೆ ಕಾಡಬಹುದು.

*ಇದನ್ನು ಮಿತವಾಗಿ ಸೇವಿಸಿ. ಒಂದು ವೇಳೆ ಅತಿಯಾದರೆ ಹೊಟ್ಟೆಯಲ್ಲಿ ಸುಡುವ ವೇದನೆ ಕಾಡುತ್ತದೆ.

*ರಾತ್ರಿ ಇದನ್ನು ಸೇವಿಸಿದ ತಕ್ಷಣ ಮಲಗಬಾರದು. ಇದರಿಂದ ಹೊಟ್ಟೆಯ ಸಮಸ್ಯೆ ಕಾಡಬಹುದು. ಹಾಗಾಗಿ ಮಲಗುವ 1 ಗಂಟೆಯ ಮೊದಲು ಸೇವಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read