ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೊಡೆ, ಹೊಟ್ಟೆ, ಸೊಂಟದ ಬಳಿ ಬೊಜ್ಜು ಬೆಳೆಯುತ್ತದೆ. ಇದು ಮುಜುಗರಕ್ಕೆ ಕಾರಣವಾಗಬಹುದು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ನಿಂದ ಮಸಾಜ್ ಮಾಡಿ.
*ರೋಸ್ಮರಿ ಎಸೆನ್ಷಿಯಲ್ ಆಯಿಲ್ : ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದಕ್ಕೆ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಇದನ್ನು ಬೊಜ್ಜು ಬೆಳೆದ ಸ್ಥಳದಲ್ಲಿ ಹಚ್ಚಿ ಮಸಾಜ್ ಮಾಡುವುದರಿಂದ ಅಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ. ಬೊಜ್ಜು ಕರಗುತ್ತದೆ.
*ಕಿತ್ತಳೆ ಎಸೆನ್ಷಿಯಲ್ ಆಯಿಲ್ : ಇದು ಕೂಡ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ ಇದನ್ನು ಪೀಡಿತ ಸ್ಥಳದಲ್ಲಿ ಹಚ್ಚಿ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಾರ ಸರಾಗವಾಗಿ ಆಗಿ ಬೊಜ್ಜು ಕರಗಿ ಹೋಗುತ್ತದೆ.
*ಫೆನ್ನಲ್ ಎಸೆನ್ಷಿಯಲ್ ಆಯಿಲ್ : ಇದು ದೇಹದಿಂದ ವಿಷವನ್ನು ಹೊರಹಾಕುವಿಕೆಯನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.