ಕೆಲ ಮಧುಮೇಹಿಗಳಿಗೆ ಬೆಳಗಿನ ಶುಗರ್ ಲೆವೆಲ್ ವಿಪರೀತ ಹೆಚ್ಚಿರುತ್ತದೆ. ಇದಕ್ಕಾಗಿ ಮಾತ್ರೆ ಅಥವಾ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಬದಲು ಈ ಕೆಳಗಿನ ಪಾನೀಯವನ್ನು ತಯಾರಿಸಿ ಸೇವಿಸಿ ನೋಡಿ.
ಸಂಶೋಧನೆಯೊಂದರ ಪ್ರಕಾರ ಬೆಳಿಗ್ಗೆ ಉಪಹಾರದೊಂದಿಗೆ ಹಾಲು ಕುಡಿಯುವುದರಿಂದ ಇಡೀ ದಿನ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾಗಿರುತ್ತದೆ ಎಂಬುದು ತಿಳಿದು ಬಂದಿದೆ. ಇದರಿಂದ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆಗಳೂ ಕಡಿಮೆ ಎನ್ನಲಾಗಿದೆ.
ಇದು ಕಾರ್ಬೋಹೈಡ್ರೇಟ್ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡಿ ಸಕ್ಕರೆ ಪ್ರಮಾಣ ಕಡಿಮೆ ಅಂಶದಲ್ಲಿ ರಕ್ತಕ್ಕೆ ಸೇರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ತಣ್ಣಗಿನ ಒಂದು ಲೋಟ ಹಾಲನ್ನು ಉಪಹಾರದೊಂದಿಗೆ ಸೇವಿಸುವುದು ಬಹಳ ಒಳ್ಳೆಯದು.
ಹಾಲಿಗೆ ಯಾವುದೇ ಎನರ್ಜಿ ಪುಡಿ ಅಥವಾ ಸಕ್ಕರೆ ಬಳಸುವುದು ಬೇಡ. ಕೆನೆರಹಿತ ಹಾಲು ಅಥವಾ ನೀರು ಬೆರೆಸಿದ ಹಾಲು ಕುಡಿಯುವುದರಿಂದ ಕಫ ಮೊದಲಾದ ಸಮಸ್ಯೆಗಳೂ ಕಾಡುವುದಿಲ್ಲ. ಜೇನುತುಪ್ಪ ಹಾಗೂ ಚಿಟಿಕೆ ಕಾಳು ಮೆಣಸಿನ ಪುಡಿ ಬೆರೆಸಿ ಹಾಲು ಕುಡಿಯುವುದರಿಂದ ಕೆಮ್ಮುವಿನ ಸಮಸ್ಯೆಯೂ ಕಾಡುವುದಿಲ್ಲ.