ದಿನಕ್ಕೊಂದು ಮುಷ್ಟಿ ಕಪ್ಪು ಒಣದ್ರಾಕ್ಷಿ ತಿನ್ನುವುದರಿಂದ ಚಳಿಗಾಲದ ಹಲವು ಸಮಸ್ಯೆಗಳಿಂದ ದೂರವಿರಬಹುದು ಎಂಬುದು ನಿಮಗೆ ಗೊತ್ತೇ…?
ತ್ವಚೆ ಬಿರುಕು ಬಿಡುವ ಸಮಸ್ಯೆಯನ್ನು ದೂರಮಾಡಲು ನಿತ್ಯ ನೀರಿನಲ್ಲಿ ನೆನೆಸಿಟ್ಟ ದ್ರಾಕ್ಷಿ ಸೇವಿಸಿ. ಇದನ್ನು ಬೆಳಗೆದ್ದು ಖಾಲಿ ಹೊಟ್ಟೆಗೆ ಸೇವಿಸಿದರೆ ಬಹಳ ಒಳ್ಳೆಯದು. ರಕ್ತವನ್ನು ಶುದ್ಧೀಕರಿಸುವ ಇದು ದೇಹದಲ್ಲಿರುವ ವಿಷ ಹಾಗೂ ತ್ಯಾಜ್ಯ ವಸ್ತುಗಳನ್ನು ಹೊರಹಾಕುತ್ತದೆ.
ವಿಟಮಿನ್ ಸಿ ಹೇರಳವಾಗಿರುವ ಕಪ್ಪು ಒಣ ದ್ರಾಕ್ಷಿಯ ಸೇವನೆಯಿಂದ ಕೂದಲು ದುರ್ಬಲಗೊಳ್ಳುವ ಹಾಗೂ ಉದುರುವ ಸಮಸ್ಯೆಗಳು ದೂರವಾಗುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕೂದಲು ಒಣಗುವ ಸಮಸ್ಯೆಗೂ ಇದು ಪರಿಹಾರ ಒದಗಿಸಬಲ್ಲದು.
ಮೂಳೆಗಳನ್ನು ದೃಢಪಡಿಸಿ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಅನ್ನು ಇದು ಒದಗಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ರಕ್ತಹೀನತೆಯನ್ನು ದೂರಮಾಡಿ ಹಲ್ಲುಗಳ ಆರೋಗ್ಯವನ್ನೂ ರಕ್ಷಿಸುತ್ತದೆ.